Advertisement

ಬಿಜೆಪಿ ಕಾರ್ಯಕಾರಿಣಿಗೆ ಹೋಗ್ತೇನೋ ಬಿಡ್ತೇನೋ ಕೇಳುವುದಕ್ಕೆ ನೀವ್ಯಾರು?

03:41 PM May 05, 2017 | Team Udayavani |

ಬೆಂಗಳೂರು: ನಾಳೆ ಮೈಸೂರಿನಲ್ಲಿ  ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಗೆ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಕೆ.ಎಸ್‌.ಈಶ್ವರಪ್ಪ ಸುದ್ದಿಗಾರರ ವಿರುದ್ಧ ಕೆಂಡಾಮಂಡಲವಾದ ಪ್ರಸಂಗ ಶುಕ್ರವಾರ ನಡೆದಿದೆ. 

Advertisement

ಚಕ್ರವರ್ತಿ ಲೇಔಟ್‌ನ ನಿವಾಸದ ಎದುರು ಸುದ್ದಿಗಾರರ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲಿ ‘ನಾನು ಕಾರ್ಯಕಾರಿಣಿಗೆ ಹೋಗ್ತೇನೋ ಬಿಡ್ತೇನೋ ಅದನ್ನು ಕೇಳುವುದಕ್ಕೆ ನೀವ್ಯಾರು..ಮಾಡೋದಕ್ಕೆ ಬೇರೆ ಕೆಲ್ಸಾ ಇಲ್ವಾ ? ನನ್ನ ಫಾಲೋ ಮಾಡಿದ್ರೆ ಸರಿ ಇರಲ್ಲ..’ ಎಂದು ಕೂಗಾಡಿದರು. 

ನಾಳೆ ಆರಂಭವಾಗಲಿರುವ ಕಾರ್ಯಕಾರಿಣಿಯಲ್ಲಿ ವಿವಿಧ ಗೋಷ್ಠಿ ಗಳು ನಡೆಯಲಿದ್ದು, ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು  ವಿಪಕ್ಷ ನಾಯಕ ಶೆಟ್ಟರ್‌ಗೆ ಗೋಷ್ಠಿಗಳನ್ನು ನಡೆಸುವ ಅವಕಾಶ ನೀಡಿ 
ಈಶ್ವರಪ್ಪ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. 

ತಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ ಎನ್ನುವುದನ್ನು ತೋರಿಸುವ ಸಲುವಾಗಿ ಈಶ್ವರಪ್ಪ ಮತ್ತು ಬೆಂಬಲಿಗರು ಕಾರ್ಯಕಾರಿಣಿಗೆ ಹಾಜರಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next