ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ನ ನವೀಕೃತ ರೂಪವಾಗಿರುವ ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿಯ 2ನೇ ಆವೃತ್ತಿ ರವಿವಾರ ಆರಂಭವಾಗಲಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್-ಬೆಂಗಳೂರು ಬ್ಲಾಸ್ಟರ್ಸ್, 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್-ಮೈಸೂರು ವಾರಿಯರ್ಸ್ ಮುಖಾಮುಖಿಯಾಗಲಿವೆ.
ಈ ಕೂಟದಲ್ಲಿ ಎರಡು ಹೊಸ ತಂಡಗಳು ಕಾಣಿಸಿಕೊಳ್ಳಲಿವೆ. ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರ್ಯಾಗನ್ಸ್ ಸೋಮವಾರ ಪರಸ್ಪರ ಮುಖಾಮುಖೀಯಾಗಲಿವೆ.
ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಮನೀಷ್ ಪಾಂಡೆ ವರಂತಹ ಖ್ಯಾತ ತಾರೆಯರ ಜತೆಗೆ ಹಲವು ಸ್ಥಳೀಯ ಆಟಗಾರರಿಗೆ ಆಡಲು ಅವಕಾಶ ಸಿಗಲಿದೆ. ಇದು ಅವರ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಬೆಂಗ ಳೂರು ಬ್ಲಾಸ್ಟರ್ಸ್‌ಗೆ ಮಾಯಾಂಕ್ ಅಗರ್ವಾಲ್ ನಾಯಕರಾಗಿದ್ದಾರೆ. ಈ ತಂಡದಲ್ಲಿ ವಿದ್ಯಾಧರ ಪಾಟೀಲ್ ಎಂಬ ವೇಗಿ ಕೂಡ ಇದ್ದಾರೆ.
ಖ್ಯಾತ ವೇಗಿ ವೈಶಾಖ್ ವಿಜಯ್ ಕುಮಾರ್ ನೇತೃತ್ವದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಹಾಲಿ ಚಾಂಪಿಯನ್ಸ್ ಎಂಬ ಹೆಮ್ಮೆಯಲ್ಲಿ ಕಣಕ್ಕಿಳಿಯುತ್ತಿದೆ. ಕೆ.ಪಿ.ಅಪ್ಪಣ್ಣ, ಅಮಿತ್ ವರ್ಮ, ಎಲ್.ಆರ್.ಚೇತನ್, ಕೆ.ವಿ.ಅನೀಶ್ ಈ ತಂಡದ ಪ್ರಮುಖರು. ಇನ್ನು ಮೈಸೂರು ವಾರಿಯರ್ಸ್‌ಗೆ ಅನುಭವಿ ಆಟಗಾರ ಕರುಣ್ ನಾಯರ್ ನಾಯಕರಾಗಿದ್ದಾರೆ. ಹುಬ್ಬಳ್ಳಿ ತಂಡದ ನೇತೃತ್ವವನ್ನು ಐಪಿಎಲ್ ತಾರೆ ಮನೀಷ್ ಪಾಂಡೆ ವಹಿಸಲಿದ್ದಾರೆ. ಇವರಿಗೆ ಸ್ಫೋಟಕ ತಾರೆ ಲವ್ನಿàತ್ ಸಿಸೋಡಿಯ ನೆರವು ನೀಡಲಿದ್ದಾರೆ.