ಉಡುಪಿ: ಕೃಷ್ಣಾಪುರ ಪರ್ಯಾಯೋತ್ಸವದ ಮೊದಲ ದಿನದ ಅನ್ನಪ್ರಸಾದವನ್ನು ಭಕ್ತರು ಸ್ವೀಕರಿಸಿದರು.
ಮಂಗಳವಾರ ಬೆಳಗ್ಗೆ 11 ಗಂಟೆಯಿಂದಲೇ ಕೃಷ್ಣ ಮಠದ ಭೋಜನ ಶಾಲೆ, ಅನ್ನ ಬ್ರಹ್ಮ, ಅನಂತೇಶ್ವರ ದೇವಳ, ರಾಜಾಂಗಣದಲ್ಲಿ ಮತ್ತು ಪಾರ್ಕಿಂಗ್ ಏರಿಯದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪಾರ್ಕಿಂಗ್ ಏರಿಯದಲ್ಲಿ ಏರ್ಪಡಿಸಿದ್ದ ಅನ್ನ ಸಂತರ್ಪಣೆಯಲ್ಲಿ ಬಫೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ 300 ಮಂದಿ ಕೋವಿಡ್ ಮಾರ್ಗಸೂಚಿಯೊಂದಿಗೆ ಸಾಮಾಜಿಕ ಅಂತರ ಪಾಲಿಸಿ ಏಕಕಾಲದಲ್ಲಿ ಊಟ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು. ಅನ್ನ ಪ್ರಸಾದ ವಿತರಣೆ ಅನುಕೂಲವಾಗಲು 20ಕ್ಕೂ ಅಧಿಕ ಕೌಂಟರ್‌ಗಳನ್ನು ವ್ಯವಸ್ಥೆ ಮಾಡಲಾಯಿತು.
ಅಲ್ಲದೆ ಅಶಕ್ತರು, ಹಿರಿಯ ನಾಗರಿಕರು ಸೇರಿದಂತೆ ನಿಂತುಕೊಂಡು ಊಟ ಮಾಡಲು ಆಗದವರಿಗೆ 250 ಮಂದಿಗೆ ಕುಳಿತು ಊಟ ಮಾಡುವ ವ್ಯವಸ್ಥೆ ಪ್ರತ್ಯೇಕವಾಗಿ ಮಾಡಲಾಗಿತ್ತು. ವಿವಿಧ ಭಜನಾ ತಂಡ, ವಿವಿಧ ಸಂಘ, ಸಂಸ್ಥೆಗಳ 500ಕ್ಕೂ ಅಧಿಕ ಮಂದಿ ಸ್ವಯಂ ಸೇವಕರು ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಪರ್ಯಾಯ ಕೃಷ್ಣಾಪುರ ಮಠದ ಬಾಣಸಿಗ ಅಚ್ಯುತ ಭಟ್ ನೇತೃತ್ವದಲ್ಲಿ 100 ಮಂದಿ ಬಾಣಸಿಗರ ತಂಡ ಊಟ-ಉಪಹಾರವನ್ನು ಸಿದ್ದಪಡಿಸಿ ದ್ದರು. ಊಟೋಪಚಾರದ ವ್ಯವಸ್ಥೆ ಯನ್ನು ಮಂಜುನಾಥ ಹೆಬ್ಟಾರ್ ನೇತೃತ್ವದ ತಂಡ ನಿರ್ವಹಿಸಿದರು.
ಬೆಳಗ್ಗೆ 10.30ಕ್ಕೆ ಆರಂಭವಾದ ಊಟೋಪಚಾರ ಸಾಯಂಕಾಲ 4 ಗಂಟೆವರೆಗೂ ಮುಂದುವರಿದಿತ್ತು.