Advertisement

Krishna – Milana; ಹೊಸ ಅತಿಥಿಯ ಆಗಮನದ ಖುಷಿಯಲ್ಲಿ ಕೃಷ್ಣ-ಮಿಲನಾ ಫೋಟೋಶೂಟ್

12:43 PM Jun 16, 2024 | Team Udayavani |

ಕೃಷ್ಣ-ಮಿಲನಾ ಜೋಡಿ ಈಗ ಹೊಸ ಅತಿಥಿಯ ಆಗಮನದಲ್ಲಿದೆ. ಇತ್ತೀಚೆಗಷ್ಟೇ ಈ ದಂಪತಿ ತಾವು ಶೀಘ್ರದಲ್ಲೇ ಪೋಷಕರಾಗುತ್ತಿರುವುದಾಗಿ ಘೋಷಿಸಿದ್ದರು. ಸದ್ಯ ಮಿಲನಾ ಹಾಗೂ ಕೃಷ್ಣ ಹೊಸ ಫೋಟೊಶೂಟ್‌ನಲ್ಲಿ ಮಿಂಚಿದ್ದಾರೆ.

Advertisement

ಪರಸ್ಪರ ಪ್ರೀತಿಸಿ 3 ವರ್ಷಗಳ ಹಿಂದೆ ಇಬ್ಬರೂ ಹಸೆಮಣೆ ಏರಿದ್ದರು. ವ್ಯಾಲೆಂಟೆನ್ಸ್‌ ಡೇ ದಿನವೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಪೋಷಕರಾಗಿ ಬಡ್ತಿ ಪಡೆಯಲು ಕಾಯುತ್ತಿದ್ದಾರೆ.

ಇತ್ತೀಚೆಗೆ ಬಾಲಿ ಪ್ರವಾಸದ ಫೋಟೋ, ವೀಡಿಯೋಗಳನ್ನು ಕೂಡ ಮಿಲನಾ ನಾಗರಾಜ್‌ ಹಂಚಿಕೊಂಡಿದ್ದರು. ಅದು ಸಖತ್‌ ವೈರಲ್‌ ಆಗಿತ್ತು.”ಲವ್‌ ಮಾಕ್ಟೇಲ್’ ಚಿತ್ರವನ್ನು ಕೃಷ್ಣ ನಿರ್ಮಿಸಿ, ನಿರ್ದೇಶಿಸಿ ನಟಿಸಿದ್ದರು. ಮಿಲನಾ ಕೂಡ ನಿರ್ಮಾಪಕಿಯಾಗಿ ನಾಯಕಿಯಾಗಿ ಜೊತೆ ನಿಂತರು. ಈ ಸಿನಿಮಾ ಬಿಡುಗಡೆ ಬಳಿಕ ಇಬ್ಬರೂ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದರು.

“ಲವ್‌ ಮಾಕ್ಟೇಲ್’ ಸಿನಿಮಾ ಸೂಪರ್‌ ಹಿಟ್‌ ಆಯಿತು. “ಮಿ. ಬ್ಯಾಚುಲರ್‌’ ಚಿತ್ರದಲ್ಲಿ ಕೂಡ ಈ ಜೊತೆ ಒಟ್ಟಿಗೆ ನಟಿಸಿತ್ತು. ಎರಡು ವರ್ಷಗಳ ಹಿಂದೆ “ಲವ್‌ ಮಾಕ್ಟೇಲ್’ ಸೀಕ್ವೆಲ್‌ ಕೂಡ ಬಂದು ಸಕ್ಸಸ್‌ ಕಂಡಿತ್ತು. “ಲವ್‌ ಬರ್ಡ್ಸ್‌’, “ಕೌಸಲ್ಯ ಸುಪ್ರಜಾ ರಾಮ’ ಹಾಗೂ “ಫಾರ್‌ ರಿಜಿಸ್ಟ್ರೇಷನ್‌’ ಸಿನಿಮಾಗಳಲ್ಲಿ ಮಿಲನಾ ನಟಿಸಿದ್ದಾರೆ. ಆಕೆಯ “ಆರಾಮ್‌ ಅರವಿಂದ ಸ್ವಾಮಿ’ ಸಿನಿಮಾ ತೆರೆಗೆ ಬರಬೇಕಿದೆ. ಸದ್ಯ ಕೃಷ್ಣ “ಫಾದರ್‌’ ಹಾಗೂ ಇನ್ನೊಂದೆರಡು ಹೊಸ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next