Advertisement

ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಸೂತ್ರಧಾರಿ

11:16 AM Aug 15, 2017 | Team Udayavani |

ಆಳಂದ: ಭಗವದ್ಗೀತೆ ಭಾರತ ಚಿಂತನೆಯ ಪರಂಪರೆಯ ತಾಯಿ ಬೇರು. ಇದನ್ನು ಬೋಧಿ ಸಿದ ಶ್ರೀಕೃಷ್ಣ ಸಮಸ್ತ ಜೀವಕೋಟಿಗೆ ಅಭಯ ನೀಡಿದ್ದಾನೆ. ಅವನ ವಂಶಜರು ಶಿಕ್ಷಣ, ಸಂಘಟನೆ, ಸಾಮಾಜಿಕ ಆರ್ಥಿಕವಾಗಿ ಅಭಿವೃದ್ಧಿ ಸಾಧಿ ಸಲು ಪ್ರಯತ್ನಿಸಬೇಕು ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಹೇಳಿದರು. ಪಟ್ಟಣದ ಗುರುಭವನ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಮಾತ್ಮನಾದ ಶ್ರೀಕೃಷ್ಣ ಲೋಕಕಂಟಕ ನಿವಾರಣೆಗೆ ಮತ್ತು ಲೋಕ ಕಲ್ಯಾಣಕ್ಕಾಗಿ ಅವತರಿಸಿರುವ ಸೂತ್ರಧಾರಿ. ಮಹಾಭಾರತ ಎಂಬ ನದಿ
ನಾವಿಕನಾಗಿ ವಿಶ್ವಕ್ಕೆ ಅಮೂಲ್ಯ ನಿಧಿಯಾದ ಭಗವದ್ಗೀತೆ ಉಪದೇಶಿಸಿದವನೇ ಶ್ರೀಕೃಷ್ಣ. ಭಗವದ್ಗೀತೆ ಭಾರತ ಚಿಂತನಾ
ಪರಂಪರೆಯ ತಾಯಿಬೇರು. ಕೃಷ್ಣ ಜನ್ಮಾಷ್ಟಮಿ ಹಿಂದುಗಳಲ್ಲಿ ಆಚರಿಸುವ ಒಂದು ಪವಿತ್ರ ಹಬ್ಬದ ದಿನವಾಗಿದೆ. ಇದು ಅಧರ್ಮ ಓಡಿಸಿ ಧರ್ಮ ರಕ್ಷಿಸುವ ಸಲುವಾಗಿ ಶ್ರೀಕೃಷ್ಣ ಜನಿಸಿದ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತಾಪಂ
ಕಾರ್ಯನಿರ್ವಾಹಕ ಅಧಿ ಕಾರಿ ಡಾ| ಸಂಜಯ ರೆಡ್ಡಿ ಮಾತನಾಡಿ, ಶ್ರೀಕೃಷ್ಣನ ಆದರ್ಶ ಮೈಗೂಡಿಸಿಕೊಂಡು ಯಾದವ (ಗೊಲ್ಲ) ಸಮುದಾಯದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸರ್ಕಾರಿ ಸೌಲಭ್ಯ ಪಡೆಯಬೇಕು ಎಂದು ಹೇಳಿದರು. ಉಪನ್ಯಾಸಕ ಸಂಜು ಪಾಟೀಲ ಉಪನ್ಯಾಸ ನೀಡಿದರು. ಪುರಸಭೆ ಮುಖ್ಯಾಧಿ ಕಾರಿ ಚಂದ್ರಕಾಂತ ಪಾಟೀಲ, ಪಿಎಸ್‌ಐ ಸುರೇಶ ಬಾಬು, ಗ್ರೇಡ್‌-2 ತಹಸೀಲ್ದಾರ ಬಿ.ಜಿ. ಕುದರಿ, ಮುಖಂಡ ದಯಾನಂದ ಶೇರಿಕಾರ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗೊಲ್ಲ ಸಮುದಾಯದ ಮುಖಂಡ ಯಲ್ಲಪ್ಪ ಸಾವಳೆ, ಯಲ್ಲಪ್ಪ ಬಿ. ಸಾವಳೆ, ಸುರೇಶ ವರನಾಳೆ, ಭೀಮಶಾ ಮಾರವಾಡಿ, ರಾಮ ಸಾವಳೆ, ಯಂಕಪ್ಪ ಇರೊಳೆ
ಇದ್ದರು. ಪ್ರಹ್ಲಾದ ಶಿಂಧೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಪ್ರಮುಖ ರಸ್ತೆಗಳ ಮೂಲಕ ಕುಂಬ ಕಳಸದೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಕೃಷ್ಣನ ಭಾವಚಿತ್ರದ ಮೆರವಣಿಗೆ ನಡೆಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next