Advertisement

ಮಾತಿನ ಮನೆಯಲ್ಲಿ ಕೃಷ್ಣ ಗಾರ್ಮೆಂಟ್ಸ್‌

11:20 AM Oct 31, 2018 | |

ಸುಮುಖ ಪಿಕ್ಚರ್ಸ್‌ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ “ಕೃಷ್ಣ ಗಾರ್ಮೆಂಟ್ಸ್‌’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಈಡನ್‌ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಚಿತ್ರಕ್ಕೆ ಬೆಂಗಳೂರು, ದೊಡªಬಳ್ಳಾಪುರ, ಹಾಸನ, ಚೆನ್ನರಾಯಪಟ್ಟಣ್ಣ ಮುಂತಾದ ಕಡೆ 50 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

Advertisement

ಪ್ರೀತಿ ಮತ್ತು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರು “ಮನೆಮಗಳು”, “ಯಶೋಧರ” ಸೇರಿದಂತೆ ಹತ್ತು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ “ಹೆಮ್ಮರ” ಚಿತ್ರವನ್ನು ಸಿದ್ದು ಅವರೆ ನಿರ್ದೇಶಿಸಿದ್ದಾರೆ. 

“ಶ್ರೀಮಾನ್‌ ಶ್ರೀಮತಿ’  ಧಾರಾವಾ ಖ್ಯಾತಿಯ ಭಾಸ್ಕರ್‌ ನೀನಾಸಂ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, “ಬ್ರಹ್ಮಾಸ್ತ್ರ’ ಧಾರಾವಾಯ ರಶ್ಮಿತ ನಾಯಕಿಯಾಗಿ ಅಭಿನುಸುತ್ತಿದ್ದಾರೆ. ಚಂದು (ಲಕ್ಷ್ಮೀ ಬಾರಮ್ಮ), ರಾಜೇಶ್‌ ನಟರಂಗ, ಹನುಮಂತ ರಾಜು, ಜಯಂತಿ, ಯಮುನ, ನಾಗಶ್ರೀ, ಪೂಜಾ, ಲಕ್ಷ್ಮೀನರಸಿಂಹ, ಪ್ರಸಾದ್‌, ವರ್ಧನ್‌ ತೀರ್ಥಹಳ್ಳಿ, ರಜನಿಕಾಂತ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  

ರಘು ಧನ್ವಂತ್ರಿ ಅವರ ಸಂಗೀತ ನಿರ್ದೇಶನರುವ ಈ ಚಿತ್ರಕ್ಕೆ ಚಿದಾನಂದ್‌ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಅವರ ಸಂಕಲನದೆ. 

Advertisement

Udayavani is now on Telegram. Click here to join our channel and stay updated with the latest news.

Next