ಬಿಜಾಪುರ್ ಬುಲ್ಸ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಬುಲ್ಸ್ ಪರ ರೋನಿತ್ ಮೋರೆ 4 ವಿಕೆಟ್ ಪಡೆದು ಮಿಂಚಿದ್ದಾರೆ. ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ 19.5 ಓವರ್‌ಗೆ 150 ರನ್ ಬಾರಿಸಿ ಆಲೌಟ್ ಆಯಿತು.
Advertisement
ಆರಂಭಿಕರಾಗಿ ಕಣಕ್ಕೆ ಇಳಿದ ಅರ್ಜುನ್ ಹೋಯ್ಸಳ ಮತ್ತು ನಾಯಕ ಕರುಣ್ ನಾಯರ್ ಜೋಡಿ 31 ರನ್ ಜತೆಯಾಟನೀಡಿತು. ಈ ಹಂತದಲ್ಲಿ ನಾಯಕ ಕರುಣ್ ನಾಯರ್ ಮೋರೆಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿನಿತ್ ಯಾದವ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ವಲ್ಪ ಸಮಯದಲ್ಲಿಯೇ ಅರ್ಜುನ್ ಕೂಡ ಔಟ್ ಆದರು. ಅರ್ಜುನ್ 31 ಎಸೆತದಲ್ಲಿ 4 ಬೌಂಡರಿ ಸೇರಿದಂತೆ 32 ರನ್ ಬಾರಿಸಿದರು. ನಂತರ ರೋನಿತ್ ಮೋರೆ ಮಾರಕ ದಾಳಿಯಿಂದಾಗಿ ಮೈಸೂರು ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಆದರೂ ಈ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಬುಲ್ಸ್ ದಾಳಿಯನ್ನು ಚೆಂಡಾಡಿದವರು ಎಂದರೇ ಸುನೀಲ್ ರಾಜು ಮತ್ತು ಜಗದೀಶ್ ಸುಚಿತ್. ಸುನಿಲ್ ರಾಜು 17 ಎಸೆತದಲ್ಲಿ 1 ಬೌಂಡರಿ, 1 ಸಿಕ್ಸರ್ ಸೇರಿದಂತೆ 22 ರನ್ ಬಾರಿಸಿದಾಗ ಮೋರೆಗೆ ವಿಕೆಟ್ ಒಪ್ಪಿಸಿದರು.
Related Articles
ಒಡೆಯರ್ ಚಾಲನೆ
ಮೈಸೂರಿನ ನರಸಿಂಹರಾಜ್ ಒಡೆಯರ್ ಅಂಗಳದಲ್ಲಿ ಆರಂ¸ಗೊಂಡ ಕೆಪಿಎಲ್ 2ನೇ ಚರಣಕ್ಕೆ ರಾಜವಂಶಸ್ಥೆ
ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮೈದಾನದಲ್ಲಿ ನಡೆದ
ವರ್ಣರಂಜಿತ ಸಮಾರಂಭದಲ್ಲಿ ಪ್ರಮೋದಾದೇವಿ ಒಡೆಯರ್ ಅವರು ರಾಜವಂಶಸ್ಥ ದಿ. ಶ್ರೀಕಂಠದತ್ತ ಒಡೆಯರ್
ಅವರ ಭಾವಚಿತ್ರ ಅನಾವರಣಗೊಳಿಸಿದರು. ಜತೆಗೆ ಉಭಯತಂಡಗಳ ಆಟಗಾರರನ್ನು ಪರಿಚಯ ಮಾಡಿಕೊಂಡು, ಶುಭಹಾರೈಸಿದರು.
Advertisement
ಅರಮನೆಗೆ ಭೇಟಿ ನೀಡಿದ ಆಸೀಸ್ಮಾಜಿ ವೇಗಿ ಬ್ರೆಟ್ ಲೀ
ಕೆಪಿಎಲ್ ವೀಕ್ಷಕ ವಿವರಣೆಗಾಗಿ ಮೈಸೂರಿಗೆ ಆಗಮಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಇಲ್ಲಿನ ವಿಶ್ವವಿಖ್ಯಾತ ಅರಮನೆಗೆ ಭೇಟಿ ನೀಡಿ ಕೆಲವು ಸಮಯ ಕಳೆದಿದ್ದಾರೆ. ಬ್ರೆಟ್ ಲೀ ಆನೆ ಸವಾರಿ ಮಾಡುವ
ಜತೆಗೆ ಅರಮನೆಯಲ್ಲಿರುವ ಮೈಸೂರು ಅರಸರ ಕಾಲದ ಪಿಯಾನೋ ನುಡಿಸಿ ತಮ್ಮ ಬದುಕಿನ ಕೆಲವು ಅಪರೂಪದ ಕ್ಷಣಗಳನ್ನು ಕಳೆದರು. ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿರುವ ಕಲ್ಲಿನ ಸಿಂಹಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್ ಜತೆ ಅರಮನೆಯ ಬಗ್ಗೆ ಮಾಹಿತಿ ಪಡೆದರು. – ಸಿ.ದಿನೇಶ್