Advertisement

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

12:28 PM Jan 08, 2025 | Team Udayavani |

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ಭೀಕರ ಸ್ಫೋ*ಟದಲ್ಲಿ ಮೃ*ತಪಟ್ಟ 8 ಮಂದಿ ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು ಎಂದು ತಿಳಿದು ಬಂದಿದೆ. ನಕ್ಸಲಿಸಂ ತೊರೆದ ನಂತರ ಐವರು ಪೊಲೀಸ್ ಪಡೆಗೆ ಸೇರಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಜಿಲ್ಲಾ ರಿಸರ್ವ್ ಗಾರ್ಡ್‌ಗೆ (DRG) ಸೇರಿದ ಹೆಡ್ ಕಾನ್ಸ್‌ಟೇಬಲ್ ಬುಧ್ರಾಮ್ ಕೊರ್ಸಾ, ಕಾನ್‌ಸ್ಟೆಬಲ್‌ಗಳಾದ ಡುಮ್ಮಾ ಮರ್ಕಮ್, ಪಂಡರು ರಾಮ್, ಬಮನ್ ಸೋಧಿ ಮತ್ತು ಬಸ್ತಾರ್ ಫೈಟರ್ಸ್‌ನ ಕಾನ್‌ಸ್ಟೆಬಲ್ ಸೋಮದು ವೆಟ್ಟಿ ಅವರು ಈ ಹಿಂದೆ ನಕ್ಸಲೈಟ್‌ಗಳಾಗಿ ಸಕ್ರಿಯರಾಗಿದ್ದರು. ಶರಣಾದ ನಂತರ ಪೊಲೀಸ್ ಪಡೆಗೆ ಸೇರಿಸಿಕೊಳ್ಳಲಾಗಿತ್ತು ಎಂದು ಬಸ್ತರ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿ ಸುಂದರರಾಜ್ ಪಿ. ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ಕೊರ್ಸಾ ಮತ್ತು ಸೋಧಿ ಬಿಜಾಪುರ ಜಿಲ್ಲೆಯ ಸ್ಥಳೀಯರಾಗಿದ್ದರೆ, ಇತರ ಮೂವರು ಪಕ್ಕದ ದಾಂತೇವಾಡ ಜಿಲ್ಲೆಯವರು ಎಂದು ಹೇಳಿದರು.

ಕಳೆದ ವರ್ಷ, ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ 792 ನಕ್ಸಲೀಯರು ಶರಣಾಗಿದ್ದಾರೆ ಎಂದು ವಿವರ ನೀಡಿದರು.

Advertisement

ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಸೋಮವಾರ ಭದ್ರತಾ ಸಿಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ನಕ್ಸಲರು ಸ್ಫೋಟಿಸಿದ ಪರಿಣಾಮ ಡಿಆರ್‌ಜಿ ಮತ್ತು ಬಸ್ತಾರ್ ಫೈಟರ್ಸ್‌ನ ಎರಡೂ ಘಟಕಗಳ ರಾಜ್ಯ ಪೊಲೀಸರ ತಲಾ ನಾಲ್ವರು ಮತ್ತು ಒಬ್ಬ ನಾಗರಿಕ ಚಾಲಕ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next