Advertisement
“ನಮ್ಮ ಮನೆಯ ಎಲ್ಲ ರಿಗೂ ಪಾಸಿಟಿವ್ ಬಂದಿತ್ತು. ಆದರೆ ನಾವು ಆತಂಕ ಪಡಲಿಲ್ಲ. ಆರೋಗ್ಯ ಇಲಾಖೆಯವರು ನೀಡಿದ ಔಷಧ ಅನುಸರಿಸಿದೆವು, ಮನೆ ಮದ್ದಿಗೂ ಆದ್ಯತೆ ನೀಡಿ ಗೆದ್ದಿದ್ದೇವೆ’ ಇದು ಈ ಕುಟುಂಬದ ಸದಸ್ಯರೊಬ್ಬರು ಹಂಚಿಕೊಂಡ ಗೆಲುವಿನ ಸೂತ್ರ.
Related Articles
ಇವರು ಮನೆಯ ಪಕ್ಕದಲ್ಲೇ ಪುಟ್ಟ ಅಂಗಡಿ ಇರಿಸಿಕೊಂಡಿದ್ದಾರೆ. ಎಲ್ಲರಿಗೂ ಪಾಸಿಟಿವ್ ಬಂದ ಕಾರಣ ಅಂಗಡಿ ತೆರೆಯುವಂತಿರಲಿಲ್ಲ. ಆಗ ಕಷ್ಟವನ್ನು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರಲ್ಲಿ ಹೇಳಿಕೊಂಡಾಗ ದಿನಸಿ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದರು. ಜತೆಗೆ ಏನು ತೊಂದರೆ ಇದ್ದರೂ ಸಂಪರ್ಕಿಸುವಂತೆ ತಿಳಿಸಿದ್ದರು.
ನೆರೆಮನೆಯ ಉದಯ ಮಲ್ಲಿ, ಊರಿನ ಮಂದಿರದವರು ಕೂಡ ನೆರವಾಗಿದ್ದರು. ಊರಿನ ಹಲವರು ಧೈರ್ಯ ತುಂಬಿದ್ದರು. ಇದೆಲ್ಲವೂ ಶೀಘ್ರ ಗುಣ ಹೊಂದಲು ಈ ಮನೆಮಂದಿಗೆ ಪ್ರೇರಣೆಯಾಗಿ ಕೆಲಸ ಮಾಡಿತು.
Advertisement
ಧೈರ್ಯದಿಂದ ಎದುರಿಸಿದೆವುಅಧಿಕಾರಿಗಳು ಪರೀಕ್ಷೆ ಕಡ್ಡಾಯ ಎಂದಾಗ ಒಪ್ಪಿಕೊಂಡೆವು. ಪಾಸಿಟಿವ್ ವರದಿ ಬಂದಾಗ ಧೈರ್ಯಗೆಡಲಿಲ್ಲ. ಮನೆಯ ಯಜಮಾನರು ವಯೋವೃದ್ಧರು ಎಂಬುದೊಂದೇ ನಮಗಿದ್ದ ಚಿಂತೆ. ಆರೋಗ್ಯ ಇಲಾಖೆಯವರು ನೀಡಿದ ಮಾತ್ರೆಗಳನ್ನು ಚಾಚೂತಪ್ಪದೆ ತೆಗೆದುಕೊಂಡೆವು. ಜತೆಗೆ ಗಿಡಮೂಲಿಕೆ ಕಷಾಯ ತಯಾರಿಸಿ ಕುಡಿದೆವು. ನಿಯಮಿತವಾಗಿ ಸ್ಟೀಮ್ ತೆಗೆದು ಕೊಂಡೆವು. ಬಿಸಿ ಬಿಸಿ ನೀರಿಗೆ ಲಿಂಬೆ ರಸ, ಉಪ್ಪು ಬೆರೆಸಿ ಬಾಯಿ, ಗಂಟಲು ಸ್ವತ್ಛಗೊಳಿಸಿಕೊಳ್ಳುತ್ತಿದ್ದೆವು. ಮಾತ್ರೆಗಳ ಜತೆಗೆ ಮನೆ ಮದ್ದಿಗೂ ಆದ್ಯತೆ ನೀಡಿದ ಪರಿಣಾಮ ಯಾವುದೇ ತೊಂದರೆ ಇಲ್ಲದೆ ಚೇತರಿಸಿ ಕೊಂಡಿದ್ದೇವೆ. ಈಗ ಎಲ್ಲರೂ ಆರೋಗ್ಯ ವಾಗಿದ್ದೇವೆ.
– ಇದು ಈ ಮನೆಮಂದಿಯ ಮಾತು ನಾವು ಧೃತಿಗೆಡದೆ ವೈದ್ಯರು ಕೊಟ್ಟ ಮಾತ್ರೆಗಳ ಜತೆಗೆ ಮನೆಮದ್ದನ್ನೂ ಸೇವಿಸಿದ್ದೇವೆ. ಕೊರೊನಾ ಬಂತೆಂದು ಧೈರ್ಯ ಕಳೆದುಕೊಳ್ಳದೆ ಯಶಸ್ವಿಯಾಗಿ ಎದುರಿಸಿದರೆ ಯಾವುದೇ ತೊಂದರೆ ಆಗದು.
– ಸರಿತಾ, ಪಲ್ಲಮಜಲು ನಿವಾಸಿ