Advertisement
ಆದಾಯ ಮೂಲವೂ ಇಲ್ಲದೆ, ಸಾಲದ ಅವಕಾಶವೂ ಇರದ ಕಾರಣ ಅನು ದಾನ ಕಡಿತವೊಂದೇ ಸದ್ಯದ ಪರಿಹಾರ ಸೂತ್ರವೆನಿಸಿದ್ದು, ಮುಂದಿನ ಬಜೆಟ್ ಮೇಲೂ ಇದು ಪರಿಣಾಮ ಬೀರುವುದು ನಿಶ್ಚಿತ. ಹಾಗಾಗಿ ಬೃಹತ್ ಮೊತ್ತ, ಭಾರೀ ವೆಚ್ಚದ ಯೋಜನೆಗಳನ್ನು ಸದ್ಯಕ್ಕೆ ಆರಂಭಿಸದಂತೆ ಸೂಚಿಸಲಾಗಿದೆ. ಲೋಕೋಪಯೋಗಿ, ಜಲ ಸಂಪನ್ಮೂಲ, ಸಮಾಜ ಕಲ್ಯಾಣ ಇಲಾಖೆ ಮತ್ತಿತರ ಪ್ರಮುಖ ಇಲಾಖೆಗಳ ಅನುದಾನ ಬಿಡುಗಡೆಯಲ್ಲಿ ವ್ಯತ್ಯಯವಾಗಬಹುದು ಎನ್ನಲಾಗಿದೆ.
ಕೋವಿಡ್‌ನಿಂದಾಗಿ ಬಜೆಟ್ ಅನುಷ್ಠಾನವೂ ನಿರೀಕ್ಷಿತ ಪ್ರಮಾಣದಲ್ಲಿಲ್ಲ. 3ನೇ ತ್ತೈಮಾಸಿಕ ಅವಧಿ ಕಳೆಯುವ ಹೊತ್ತಿಗೂ ಬಜೆಟ್ ಅನುಷ್ಠಾನವು ಅರ್ಧದಷ್ಟು ಗುರಿ ಸಾಧಿಸಲು ಹೆಣಗಾಡುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಬಜೆಟ್ ಅನುಷ್ಠಾನ ಪ್ರಮಾಣ ಶೇ. 45ರ ಆಸು ಪಾಸಿ ನಲ್ಲಿತ್ತು. ಪ್ರಮುಖ ಇಲಾಖೆ ಗಳ ಬಾಕಿ ಬಿಲ್ ಪಾವತಿಗೆ ದೊಡ್ಡ ಮೊತ್ತದ ಅನುದಾನ ಆಗಾಗ ಬಿಡುಗಡೆ ಯಾಗಿದೆ. ಆರ್ಥಿಕ ವರ್ಷಾಂತ್ಯದ ಮಾರ್ಚ್ ತಿಂಗಳಲ್ಲೇ ಶೇ. 25ರಿಂದ ಶೇ. 30ರಷ್ಟು ಅನುದಾನ ಬಳಕೆಯಾಗುವುದು ವಾಡಿಕೆ. ಅದರಂತೆ ವರ್ಷಾಂತ್ಯದೊಳಗೆ ಲಭ್ಯವಿರುವ ಅನುದಾನ ಬಳಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ರಾಜಸ್ವ ಸಂಗ್ರಹ ಇಳಿಕೆ
2020-21ನೇ ಸಾಲಿನಲ್ಲಿ ಒಟ್ಟು 1.79 ಲಕ್ಷ ಕೋ.ರೂ. ರಾಜಸ್ವ ನಿರೀಕ್ಷಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ತೆರಿಗೆ ಆದಾಯ ಖೋತಾ ಆಗಿದ್ದು ಸರಕಾರವು ರಾಜಸ್ವ ನಿರೀಕ್ಷೆಯನ್ನು 1.14 ಲಕ್ಷ ಕೋಟಿ ರೂ.ಗೆ ಇಳಿಸಿದೆ. ಅಂದರೆ ನಿರೀಕ್ಷಿತ ರಾಜಸ್ವದಲ್ಲಿ 65,000 ಕೋಟಿ ರೂ. ಕೈತಪ್ಪುವುದನ್ನು ಸರಕಾರವೇ ಒಪ್ಪಿಕೊಂಡಂತಾಗಿದೆ.
Related Articles
ಕೊರೊನಾದ ಪರಿಣಾಮವಾಗಿ ಸದ್ಯ ಆದಾಯ ಖೋತಾ- ವೆಚ್ಚ ಹೆಚ್ಚಳ ಎಂಬ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ತುರ್ತು ಅಲ್ಲದ, ಮುಂದೂಡ ಬಹುದಾದ ಯೋಜನೆ, ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಕೈಬಿಡುವ ಮೂಲಕ ಕೊರತೆ ಪ್ರಮಾಣ ತಗ್ಗಿಸುವತ್ತ ಪ್ರಯತ್ನ ಕೈಗೊಳ್ಳಬೇಕಾಗುತ್ತದೆ ಎಂದು ಸರಕಾರಿ ಮೂಲಗಳು ಹೇಳಿವೆ.
Advertisement