Advertisement

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

12:50 AM Nov 23, 2024 | Team Udayavani |

ಮುಂಬಯಿ: ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುಪ್ರಿಯಾ ಶ್ರೀನೇತ್‌ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾಬ್ಡೆ 100 ಕೋಟಿ ರೂ.ಗಳ ಮಾನಹಾನಿ ನೋಟಿಸ್‌ ನೀಡಿದ್ದಾರೆ.

Advertisement

ತಾಬ್ಡೆ ಹಣ ಹಂಚುತ್ತಿ ದ್ದರು ಎಂಬ ಬಿವಿಎ ನಾಯಕ ಹಿತೇಂದ್ರ ಠಾಕೂರ್‌ ಆರೋಪವನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ “ಟೆಂಪೋ ದಲ್ಲಿ 5 ಕೋಟಿ ರೂ. ಮೊತ್ತ ಎಲ್ಲಿಂದ ಬಂತು?’ ಎಂದು ಪ್ರಶ್ನಿಸಿದ್ದರು. ಖರ್ಗೆ ಕೂಡ ಮಹಾರಾಷ್ಟ್ರವನ್ನು ಹಣ ಬಲ, ತೋಳ್ಬಲದಿಂದ ರಕ್ಷಿಸಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಕ್ಷಮೆ ಕೋರಬೇಕು ಇಲ್ಲವೇ ಮಾನನಷ್ಟ ಮೊಕದ್ದಮೆ ಎದುರಿಸಬೇಕು ಎಂದು ತಾಬ್ಡೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next