Advertisement

ಕೋವಿಡ್-19 ಪಸರಿಸಿದ ಚೀನದ ಜೀವರಕ್ಷಕ ನಾಟಕ

09:52 AM Mar 31, 2020 | Sriram |

ಹೊಸದಿಲ್ಲಿ: ಇಡೀ ಜಗತ್ತಿಗೆ ಕೋವಿಡ್-19 ಪಸರಿಸಿದ ಚೀನ ಈಗ ಅದರಿಂದ ಚೇತರಿಸಿಕೊಂಡ ಬೆನ್ನಿಗೇ ಆ ಕಾಯಿಲೆಗೆ ಅಗತ್ಯವಾಗಿ ಬೇಕಾಗಿರುವ ವೈದ್ಯಕೀಯ ಸಾಮಗ್ರಿಗಳ ಬೃಹತ್‌ ಪ್ರಮಾಣದ ಉತ್ಪಾದನೆಯನ್ನು ಆರಂಭಿಸಿದೆ.

Advertisement

ಕೋವಿಡ್-19 ರುದ್ರತಾಂಡವ ಆಡುತ್ತಿರುವ ರಾಷ್ಟ್ರಗಳಿಗೆ ಅತ್ಯಗತ್ಯವಾಗಿ ಬೇಕಿರುವ ಜೀವರಕ್ಷಕ ಸಾಧನವಾದ ವೆಂಟಿಲೇಟರ್‌ಗಳನ್ನು ಭಾರೀ ಪ್ರಮಾಣದಲ್ಲಿ ತಯಾರಿಸುವಲ್ಲಿ ಅದೀಗ ನಿರತವಾಗಿದೆ.

ಚೀನದ ಮೂಲೆಮೂಲೆಗಳ ಕಾರ್ಖಾನೆಗಳಲ್ಲಿ ವೆಂಟಿಲೇಟರ್‌ಗಳನ್ನು ಸಮರೋಪಾದಿಯಲ್ಲಿ ತಯಾರಿಸಲಾಗುತ್ತಿದೆ. ಮಾತ್ರವಲ್ಲದೆ ಥರ್ಮೋಮೀಟರ್‌ಗಳು, ಫೇಸ್‌ ಮಾಸ್ಕ್ಗಳು, ವೈದ್ಯರು ಹಾಕಿಕೊಳ್ಳುವ ರೋಗ ನಿರೋಧಕ ಪ್ಲಾಸ್ಟಿಕ್‌ ಕೋಟ್‌ಗಳನ್ನೂ ಕೋಟ್ಯಂತರ ಸಂಖ್ಯೆಯಲ್ಲಿ ಉತ್ಪಾದಿಸಲಾಗುತ್ತಿದೆ.

ಕೋಟ್ಯಂತರ ಆರ್ಡರ್‌ಗಳು
ವುಹಾನ್‌ನಲ್ಲಿ ಉಗಮವಾಗಿ ಈಗ ವಿಶ್ವದ ತುಂಬೆಲ್ಲ ಹಾಹಾಕಾರ ನಡೆಸುತ್ತಿರುವ ಕೋವಿಡ್-19 ಈಗ ತನ್ನ ತವರಿನಲ್ಲಿ ಹತೋಟಿಗೆ ಬಂದಿದೆ. ಹಾಗಾಗಿ ಚೀನದ ಕೈಗಾರಿಕಾ ವಲಯ ಈಗ ಮತ್ತೆ ಸದ್ದು ಮಾಡತೊಡಗಿದ್ದು, ಕೋಟಿ ಗಟ್ಟಲೆ ಉಪಕರಣಗಳ ಆರ್ಡರ್‌ ಪಡೆದಿವೆ.

ಟೆಸ್ಟ್‌ ಕಿಟ್‌ ವಾಪಸ್‌
ಲಕ್ಷಾಂತರ ಡಾಲರ್‌ ತೆತ್ತು ಚೀನದಿಂದ ವೈದ್ಯಕೀಯ ಸಲಕರಣೆಗಳನ್ನು ಪಡೆದಿರುವ ಸ್ಪೇನ್‌ ಕಳಪೆ ಗುಣಮಟ್ಟದ ಕಾರಣಕ್ಕಾಗಿ 9 ಸಾವಿರ ಟೆಸ್ಟ್‌ ಕಿಟ್‌ಗಳನ್ನು ಚೀನಕ್ಕೆ ವಾಪಸ್‌ ಕಳುಹಿಸಲು ನಿರ್ಧ ರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next