Advertisement

Udupi ಕೋಟಿ ಗೀತಾ ಲೇಖನ: ಮಲಯಾಳ ಆವೃತ್ತಿ ಬಿಡುಗಡೆ

11:09 PM Nov 12, 2023 | Team Udayavani |

ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಪರ್ಯಾಯ ತೀರ್ಥಕ್ಷೇತ್ರ ಯಾತ್ರೆಯು ಕೇರಳದ ತಿರುವನಂತಪುರ ಪ್ರವೇಶಿಸಿದೆ.

Advertisement

ಇಲ್ಲಿನ ಮಾಧ್ವ ತುಳು ಬ್ರಾಹ್ಮಣ ಸಮಾಜದವರು ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರನ್ನು ಗೌರವ ಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸಿದರು. ಆಂಜ ನೇಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಪಾದರು ತಿರುವನಂತಪುರದ ಎಲ್ಲ ಭಕ್ತರನ್ನು ಪರ್ಯಾಯಕ್ಕೆ ಆಹ್ವಾನಿಸಿ, ಗುರುಗಳ ಪರ್ಯಾಯದ ವಿಶೇಷ ಯೋಜನೆಗಳ ಬಗ್ಗೆ ತಿಳಿಸಿ ಸಹಕಾರ ಕೋರಿದರು.

ಉದ್ಯಮಿ ಭೀಮಾ ಜುವೆಲರ್ ಮಾಲಕ ಗೋವಿಂದರಾಯ ಅವರು ಕೋಟಿ ಗೀತಾ ಲೇಖನದ ಯೋಜನೆಯ ಮಲಯಾಳ ಭಾಷೆಯ ಗೀತಾ ಪುಸ್ತಕವನ್ನು ಬಿಡುಗಡೆಗೊಳಿಸಿ, ಕೇರಳ ಪ್ರಾಂತದಲ್ಲಿ ಶ್ರೀಪಾದರ ಎಲ್ಲ ಯೋಜನೆ ಗಳಲ್ಲಿ ತಮ್ಮ ಇಡೀ ಸಮಾಜ ಕೈ ಜೋಡಿಸಿ ಪರ್ಯಾಯದಲ್ಲಿ ಸಹಕಾರ ಕೊಡಲಿದ್ದೇವೆ ಎಂದರು.

ಸಮಾಜದ ಅಧ್ಯಕ್ಷ ಉಪೇಂದ್ರ ಪೋತಿ, ಉಪಾಧ್ಯಕ್ಷ ನಾಗರಾಜರಾಯರು, ದೇವಸ್ಥಾನದ ಆಡಳಿತಾಧಿಕಾರಿ ರವೀಂದ್ರನ್‌, ಮಹಾನಗರಪಾಲಿಕೆ ಸದಸ್ಯೆ ಜಾನಕಿ, ಕಾರ್ಯದರ್ಶಿ ಸೀತಾರಾಮ, ರಾಮರಾಜ್‌, ಕೇರಳ ಹಿಂದೂ ಪರಿಷತ್‌ನ ಗೋಪಾಲ್‌, ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ರಾಜಲಕ್ಷ್ಮೀ ಮೋಹನ್‌, ಯುವ ಘಟಕ ಅಧ್ಯಕ್ಷೆ ಮಾಳವಿಕಾ, ಕೇರಳ ತುಳು ಬ್ರಾಹ್ಮಣ ಸಮಾಜದ ಅಧ್ಯಕ್ಷ ಸುರೇಶ್‌ ಉಪಸ್ಥಿತರಿದ್ದರು.

ಸೂರಜ್‌ ಸ್ವಾಗತಿಸಿ, ಸೂರ್ಯ ನಾರಾಯಣ ಕುಂಜೂರಾ ಯರು ವಂದಿಸಿದರು. ಯಾತ್ರಾ ವ್ಯವಸ್ಥಾಪಕ ರಮೇಶ್‌ ಭಟ್‌ ಕೆ. ಸಂಯೋಜಿಸಿದ್ದರು.

Advertisement

ಶ್ರೀಪಾದರಿಗೆ ಶ್ರೀ ಅನಂತಪದ್ಮನಾಭ ದೇವರ ದರ್ಶನ ಮಾಡಿಸಿದ ಪ್ರಧಾನ ಅರ್ಚಕ ರಾಜೇಂದ್ರ ಅರಣಿತ್ತಾಯರು ಪರ್ಯಾಯವು ಯಶಸ್ವಿಯಾಗಿ ನಡೆ ಯಲಿ, ಶ್ರೀ ಅನಂತ ಪದ್ಮನಾಭನ ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸಿ ವಿಶೇಷ ಪ್ರಸಾದ ನೀಡಿದರು. ಅನಂತಪದ್ಮನಾಭನ ಪ್ರಸಾದವನ್ನು ಪರ್ಯಾಯ ದರ್ಬಾರಿಗೆ ಕಳುಹಿ ಸುವುದಾಗಿ ತಿಳಿಸಿದರು.

ಶ್ರೀಪಾದರು ಹನುಮಾನ್‌ ದೇವ ಸ್ಥಾನದಲ್ಲಿ ಸಂಸ್ಥಾನ ಪೂಜೆ ನಡೆಸಿ ಅನೇಕ ಭಕ್ತರಿಗೆ ಗೀತಾ ಲೇಖನ ದೀಕ್ಷೆ ನೀಡಿ ಅನುಗ್ರಹಿಸಿದರು. ತಿರುವನಂತಪುರದ ರಾಜ ಆದಿತ್ಯ ವರ್ಮರಿಗೆ ವಿಶೇಷ ಪರ್ಯಾಯ ರಾಯಸ ಕಳಿಸಿದ್ದು, ದರ್ಬಾರ್‌ ಕಾರ್ಯಕ್ರಮದಲ್ಲಿ ಭಾಗವ ಹಿಸುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next