ಮುಂಬಯಿ: ಬಿಲ್ಲವ ಅಸೋಸಿಯೇಶನ್ ಮುಂಬಯಿ ಇದರ ಯುವ ವಿಭಾಗದ ವತಿಯಿಂದ ವಾರ್ಷಿಕ ಕೋಟಿ-ಚೆನ್ನಯ ಕ್ರೀಡೋತ್ಸವವು ಡಿ. 25ರಂದು ಮರೀನ್‌ಲೈನ್ಸ್‌ನ ಯುನಿವರ್ಸಿಟಿ ನ್ಪೋರ್ಟ್ಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ಜರಗಲಿದ್ದು, ಇದರ ಪೂರ್ವಭಾವಿ ಸಭೆಯು ನ. 4ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಜರಗಿತು.
ಬಿಲ್ಲವ ಮಹಾಮಂಡಳದ ಅಧ್ಯಕ್ಷ ಜಯ ಸಿ. ಸುವರ್ಣ ಅವರ ಉಪಸ್ಥಿತಿಯಲ್ಲಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೇಂದ್ರ ಕಚೇರಿ ಮತ್ತು ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು ಸೇರಿದಂತೆ ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವಾರ್ಷಿಕ ಕ್ರೀಡೋತ್ಸವವು ಬೆಳಗ್ಗೆ 7.30 ರಿಂದ ಪ್ರಾರಂಭಗೊಳ್ಳಲಿದ್ದು, ನಗರದ ಸ್ಥಳೀಯ ಕಚೇರಿಯ ಮುಖೇನ ಭಾಗವಹಿಸುವ ಕ್ರೀಡಾಳುಗಳು ತಮ್ಮ ಅರ್ಜಿಪತ್ರಗಳನ್ನು ಡಿ. 17 ರಒಳಗಾಗಿ ತಲುಪಿಸತಕ್ಕದ್ದು. ಮಾತ್ರವಲ್ಲದೆ ಅವುಗಳನ್ನು ಎಕ್ಸ್‌ಎಲ್ ಫಾರ್ಮೆಟ್ ರೂಪದಲ್ಲಿ ಮೇಲ್ ಮಾಡತಕ್ಕದ್ದು. ಈ ಅದ್ದೂರಿ ಕ್ರೀಡೋತ್ಸವಕ್ಕೆ ನಗರದ ಉದ್ಯಮಿಗಳು, ಹೊಟೇಲಿಗರು, ಸಂಘಟಕರು, ಸರ್ವ ರೀತಿಯಲ್ಲಿ ಸಹಕರಿಸಲಿದ್ದಾರೆ. ಎಲ್ಲಾ ಸ್ಥಳೀಯ ಕಚೇರಿಯ ಮುಖೇನ ಆರ್ಥಿಕವಾಗಿ ಸಹಕರಿಸಬೇಕು ಎಂದು ಮನವಿ ಮಾಡಲಾಯಿತು. ಮಾತ್ರವಲ್ಲದೆ ಸದ್ಯವೆ ಇನ್ನೊಂದು ಸಮಾಲೋಚನ ಸಭೆ ಜರಗಲಿದ್ದು, ಮುಂದಿನ ಪ್ರಮುಖ ವಿಷಯಗಳನ್ನು ಅದರಲ್ಲಿ ಚರ್ಚಿಸಲಾಯಿತು.
ಸಮಾಲೋಚನ ಸಭೆಯ ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಅಂಚನ್, ಕೋಶಾಧಿಕಾರಿ ಮಹೇಶ್ ಸಿ. ಪೂಜಾರಿ, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು, ಕಾರ್ಯದರ್ಶಿ ಉಮೇಶ್ ಕೆ. ಕೋಟ್ಯಾನ್, ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ, ಅಸೋಸಿಯೇಶನ್‌ನ ಪಪದಾಧಿಕಾರಿಗಳಾದ ಸದಾಶಿವ ಕರ್ಕೇರ, ರವಿ ಸನಿಲ್, ರವೀಂದ್ರ ಅಮೀನ್, ಧನಂಜಯ ಶಾಂತಿ, ಪ್ರೇಮ್‌ನಾಥ್ ಭಾಸ್ಕರ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.