Advertisement
ಸಭೆಯಲ್ಲಿ ಕೋಟೇಶ್ವರ, ಕುಂಬ್ರಿ, ಹಾಗೂ ಅಂಕದ ಕಟ್ಟೆ ಪರಿಸರದ ಹಲವು ಸಮಸ್ಯೆಗಳ ಬಗ್ಗೆ ಮಕ್ಕಳ ಮಿತ್ರ ತಂಡದ ಮಕ್ಕಳು ಧ್ವನಿ ಎತ್ತಿದರು. ಕೋಟೇಶ್ವರ ಸರಕಾರಿ ಹಿ.ಪ್ರಾ. ಶಾಲೆಯ ಸನಿಹ ತ್ಯಾಜ್ಯ ಎಸೆಯಲಾಗುತ್ತಿದ್ದು ಅದನ್ನು ಸುಡುವ ವ್ಯವಸ್ಥೆ ಈವರೆಗೆ ನಡೆದಿಲ್ಲ. ನಲಿ-ಕಲಿ ಕೊಠಡಿ ಬಳಿ ಕಸ ಸುಡುತ್ತಿರುವುದು ವಿದ್ಯಾರ್ಥಿಗಳಿಗೆ ಉಸಿರು ಕಟ್ಟುವ ವಾತಾವರಣ ನಿರ್ಮಿಸಿದೆ. ಅಕ್ಷರ ದಾಸೋಹ ಕೊಠಡಿಯ ತ್ಯಾಜ್ಯ ನೀರು ಸಮರ್ಪಕವಾಗಿ ಹರಿಯಲು ವ್ಯವಸ್ಥೆ ಇಲ್ಲವೆಂದು ಮಕ್ಕಳು ಸಭೆಯ ಗಮನ ಸೆಳೆದರು.
ಕುಂಬ್ರಿ ಶಾಲೆಯ ಮಕ್ಕಳು ಬೊಬ್ಬರ್ಯ ದೇವಸ್ಥಾನದ ಬಳಿ ಇರುವ ಕೆರೆಗೆ ಅವರಣವಿಲ್ಲದಿರುವುದರ ಬಗ್ಗೆ ಸಭೆಯ ಗಮನ ಸೆಳೆಯುವುದರ ಜತೆ ಶಾಂತಿ ನಗರದ ರಸ್ತೆಯ ದುಸ್ತಿತಿಯ ಬಗ್ಗೆ ಗ್ರಾ.ಪಂ. ಗಮನ ಹರಿಸಬೇಕೆಂದರು. ಕುಂಬ್ರಿ ಕಾಳಿಕಾಂಬ ದೇಗುಲದಿಂದ ಚಿಕ್ಕು ಅಮ್ಮ ದೇವಸ್ಥಾನದ ವರೆಗೆ ದಾರಿ ದೀಪದ ಅಗತ್ಯತೆಯನ್ನು ಸಭೆಗೆ ವಿವರಿಸಿದರು. ಮಕ್ಕಳ ಮಿತ್ರ ತಂಡದ ನಾಯಕರಾದ ರಜತ, ಸುಬ್ರಹ್ಮಣ್ಯ, ಶ್ರೀದೇವಿ, ಶ್ರೀನಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ ಸಭಾಧ್ಯಕ್ಷತೆ ವಹಿಸಿ ಮಕ್ಕಳ ಅಹವಾಲಿಗೆ ಸ್ಪಂದಿಸುವುದಾಗಿ ಹೇಳಿದರು. ಉಪಾಧ್ಯಕ್ಷ ಉದಯ ನಾಯಕ್, ಪ್ರಾ. ಆರೋಗ್ಯ ಕೇಂದ್ರ ವೈದಾಧಿಕಾರಿ ಡಾ| ಪೂರ್ಣಿಮಾ, ನಮ್ಮ ಭೂಮಿಯ ಮುಖ್ಯಸ್ಥೆ ವನಜಾ, ಸ್ನೇಹಾ, ಕುಟುಂಬ ಕಲ್ಯಾಣ ಇಲಾಖೆಯ ಅ ಧಿಕಾರಿಗಳು, ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಕರುಣಾಕರ ಶೆಟ್ಟಿ, ಕೋಟೇಶ್ವರ, ಕುಂಬ್ರಿ ಹಾಗೂ ಅಂಕದ ಕಟ್ಟೆ ಶಾಲೆಯ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ದೇಜಪ್ಪ ಕುಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಮ್ಮ ಭೂಮಿಯ ವನಜ ಪ್ರಾಸ್ತಾವಿಕವಾಗಿ ಮಾತನಾಡಿದರು.
Related Articles
ಸಭೆಯಲ್ಲಿ ಶಾಲಾ ಮಕ್ಕಳು ತುಂಬಿದ್ದರೂ ಮಹಿಳೆಯರ ಸಂಖ್ಯೆ ವಿರಳವಾಗಿತ್ತು. ಉಪಸ್ಥಿತರಿದ್ದª ಮಹಿಳೆಯರು ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಮೌನಕ್ಕೆ ಶರಣಾಗಿರುವುದು ಮಹಿಳಾ ವಿಶೇಷ ಗ್ರಾಮ ಸಭೆಯ ಔಚಿತ್ಯ ಪ್ರಶ್ನಿಸುವಂತಿತ್ತು. ಶಾಲಾ ಮಕ್ಕಳು ಭಿತ್ತಿ ಫಲಕಗಳನ್ನು ಹಿಡಿದು ಮಕ್ಕಳ ಹಕ್ಕಿನ ಘೋಷಣೆಯೊಡನೆ ಪುರಮೆರವಣಿಗೆ ನಡೆಸಿದರು.
Advertisement