Advertisement

ಅಪಘಾತ ಆಹ್ವಾನಿಸುವ ಕೋಟೇಶ್ವರ ಬೈಪಾಸ್‌ ಜಂಕ್ಷನ್‌

12:25 AM Jan 19, 2020 | mahesh |

ಕೋಟೇಶ್ವರ: ಬೆಳೆಯುತ್ತಿರುವ ಕೋಟೇಶ್ವರದ ಬೈಪಾಸ್‌ ಕ್ರಾಸ್‌ ದಟ್ಟನೆಯಿಂದ ಕೂಡಿದ್ದು, ಅಪಘಾತ ವಲಯವಾಗಿ ಪರಿವರ್ತನೆ ಗೊಂಡಿದೆ. ಎಂಬಾಕ್‌ವೆುಂಟ್‌ನಿಂದ ಸಾಗಿ ಹಾಲಾಡಿಯತ್ತ ತೆರಳುವ ದಾರಿ ಮಧ್ಯೆ ಎದುರಾಗುವ ಸಮಸ್ಯೆಗೆ ಈವರೆಗೆ ಪರಿಹಾರ ಕಂಡುಕೊಂಡಿಲ್ಲ. ಕುಂದಾಪುರದಿಂದ ಸರ್ವಿಸ್‌ ರಸ್ತೆ ಮಾರ್ಗವಾಗಿ ಕೋಟೇಶ್ವರ ಬೈಪಾಸ್‌ ತಲುಪುವ ಬಸ್ಸು, ರಿಕ್ಷಾ, ಸಹಿತ ಘನ ವಾಹನಗಳಿಗೆ ಕೋಟೇಶ್ವರ ಪೇಟೆಯಿಂದ “ಯು’ ತಿರುವಿನ ಮೂಲಕ ಉಡುಪಿಯತ್ತ ಸಾಗುವ ಲಘು ಹಾಗೂ ಘನವಾಹನಗಳು ಸಹಿತ ದ್ವಿಚಕ್ರ ವಾಹನಗಳಿಗೆ ಇಲ್ಲಿ ಅಪ‌ಘಾತ ಕಟ್ಟಿಟ್ಟ ಬುತ್ತಿ. ಹಗಲು ರಾತ್ರಿ ಎನ್ನದೇ ಸದಾ ವಾಹನ ಸಂಚಾರವಿರುವ , ಈ ಮಾರ್ಗಗಳ ಮಧ್ಯೆ ಎದುರಾಗುವ ಸಮಸ್ಯೆ ನಿವಾರಿಸಲು ಹೆದ್ದಾರಿ ಇಲಾಖೆ ಸಹಿತ ಟ್ರಾಫಿಕ್‌ ಪೊಲೀಸರು ಕ್ರಮಕೈಗೊಳ್ಳಬೇಕಾಗಿದೆ.

Advertisement

ಬೆಳಕಿನ ಕೊರತೆ
ರಾತ್ರಿ ಹೊತ್ತು ಆಸುಪಾಸಿನ ಗ್ರಾಮ ಸಹಿತ ಬೆಂಗಳೂರು, ಮೈಸೂರು ಮುಂತಾದೆಡೆ ತೆರಳಲು ಬಸ್ಸಿಗಾಗಿ ಕಾಯುವ ಮಹಿಳೆಯರು ಯುವತಿಯರು ಸಹಿತ ವಯೋವೃದ್ಧªರ ಪ್ರಕಾರ ದೀಪದ ಕೊರತೆಯಿಂದ ಬವಣಿಸುವಂತಾಗಿದೆ.

ಶೌಚಾಲಯ ಬೇಕು
ನಾನಾ ಕಡೆಯಿಂದ ಆಗಮಿಸುವ ಪ್ರಯಾಣಿಕರಿಗೆ ತುರ್ತು ಅಗತ್ಯವಿರುವ ಶೌಚಾಲಯದ ಕೊರತೆ ನಿಭಾಯಿಸುವಲ್ಲಿ ಸಂಘಟನೆಗಳು ಕ್ರಮಕೈಗೊಂಡಲ್ಲಿ ಹೆಚ್ಚಿನ ಅನುಕೂಲತೆ ಕಲ್ಪಿಸಿದಂತಾಗುವುದು ಎಂದು ಪ್ರಯಾಣಿಕರು ಅಭಿಪ್ರಾಯ ಪಟ್ಟಿದ್ದಾರೆ.

ನಿಯಮ ಪರಿಪಾಲನೆಯ ಕೊರತೆ
ವಾಹನ ಚಲಾಯಿಸುವವರು ರಸ್ತೆ ಸಾರಿಗೆ ನಿಯಮ ಉಲ್ಲಂಘನೆ ಮಾಡಿ ಮನಬಂದಂತೆ ಚಲಾಯಿಸುತ್ತಿರುವುದು ಪಾದಚಾರಿಗಳು ಸಹಿತ ಲಘುವಾಹನ ಚಾಲಕರಿಗೆ ಭಯದ ವಾತಾವರಣ ಎದುರಾಗಿದೆ. ಅಮಿತ ವೇಗದಿಂದ ಪಾನ ಮತ್ತರಾಗಿ ಸಾಗುವ ಮಂದಿಯ ಈ ಪ್ರವೃತ್ತಿಗೆ ನಿಯಂತ್ರಣ ಸಾಧಿಸದಿದ್ದಲ್ಲಿ ದುರಂತ ಸನಿಹ.

ಅಪಘಾತಗಳನ್ನು ನಿಯಂತ್ರಿಸಲು ಹಂಪ್‌ ನಿರ್ಮಾಣ ಅಗತ್ಯ
ಕೋಟೇಶ್ವರ ಬೈಪಾಸ್‌ ಜಂಕ್ಷನ್‌ನ ಹಾಲಾಡಿಗೆ ಸಾಗುವ ಮುಖ್ಯ ಮಾರ್ಗದಲ್ಲಿ ವಾಹನಗಳ ವೇಗದ ನಿಯಂತ್ರಣಕ್ಕೆ ರಸ್ತೆ ಉಬ್ಬು ( ಹಂಪ್‌ ) ನಿರ್ಮಿಸಿದಲ್ಲಿ ಎದುರಾಗಬಹುದಾದ ಅಪಘಾತಗಳನ್ನು ನಿಯಂತ್ರಿಸಬಹುದು.
– ಬುದ್ದರಾಜ ಶೆಟ್ಟಿ,  ಸಮಾಜ ಸೇವಕ, ಕೋಟೇಶ್ವರ

Advertisement

ಟ್ರಾಫಿಕ್‌ ಪೊಲೀಸರ ನಿಯೋಜನೆ ಅಗತ್ಯ
ರಾ.ಹೆದ್ದಾರಿಯ ವ್ಯಾಪ್ತಿಗೆ ಸೇರುವ ಕೋಟೇಶ್ವರ ಬೈಪಾಸ್‌ ಜಂಕ್ಷನ್‌ ಸಮಸ್ಯೆ ಬಗೆಹರಿಸುವ ಹೊಣೆ ಇಲಾಖೆಗೆ ಸೇರಿದೆ. ಹಾಗೂ ವಾಹನ ನಿಲುಗಡೆ ಸಂಚಾರ ವ್ಯವಸ್ಥೆ ಬಗ್ಗೆ ಟ್ರಾಫಿಕ್‌ ಪೊಲೀಸರ ನಿಯೋಜನೆ ಅಗತ್ಯ.
-ಶಾಂತಾ ಗೋಪಾಲಕೃಷ್ಣ, ಅಧ್ಯಕ್ಷರು ಕೋಟೇಶ್ವರ ಗ್ರಾ.ಪಂ.

ಸಂಚಾರಕ್ಕೆ ತೊಡಕು
ಎಕ್ಸ್‌ಪ್ರೆಸ್‌ ಹಾಗೂ ಇನ್ನಿತರ ಬಸ್ಸುಗಳು ಮನಬಂದಂತೆ ಮುಖ್ಯ ರಸ್ತೆಗೆ ಅಡ್ಡವಾಗಿ ನಿಲುಗಡೆಗೊಳಿಸಿ ಇನ್ನಿತರ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿರುವುದು ಕಿರಿಕಿರಿ ಉಂಟುಮಾಡಿದ್ದು ಸುಗಮ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
-ರವೀಂದ್ರ ನಾವಡ ಎಸ್‌.ಎನ್‌., ಅಧ್ಯಕ್ಷ, ರೋಟರಿ ಕ್ಲಬ್‌, ಕೋಟೇಶ್ವರ

 ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next