Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತ ಶೈಲಿ, ನಿರಂತರ ವೈಫಲ್ಯ ಹಾಗೂ ಗೊಂದಲಮಯ ರಾಜಕಾರಣವು ಜನರಲ್ಲಿ ಆತಂಕ ಸೃಷ್ಟಿಸಿದೆ.ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2015ರಲ್ಲಿ ಆಯೋಗದ ಮೂಲಕ ಸುಮಾರು 165 ಕೋ.ರೂ. ವೆಚ್ಚ ಮಾಡಿ ಜಾತಿ ಗಣತಿ ವರದಿ ಸಿದ್ಧಪಡಿಸಿದ್ದರು. ಅವರ ಮೊದಲ ಅವಧಿ ಮುಗಿದು, ಸಮ್ಮಿಶ್ರ ಸರಕಾರ ಬಂದು, ಇದೀಗ ಅವರದ್ದೇ ಸರಕಾರ ಇದ್ದರೂ ವರದಿ ಅಂಗೀಕಾರ ಮಾಡಿಲ್ಲ. ಬದಲಾಗಿ ವರದಿ ಅಂಗೀಕಾರಕ್ಕಾಗಿಯೇ ಸಮಾವೇಶ ನಡೆಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಅಹಿಂದ ನಾಯಕರಾಗಿದ್ದ ಸಿದ್ದರಾಮಯ್ಯ ಇದೀಗ ಅಲ್ಪಸಂಖ್ಯಾಕರ ನಾಯಕರಾಗಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಸ್ಟೆಲ್ ಸೀಟ್ ಹೆಚ್ಚಿಸಲು ಮನವಿ ಮಾಡಿದ್ದರೂ ಹೆಚ್ಚಳ ಮಾಡಿಲ್ಲ, ವಿದ್ಯಾರ್ಥಿವೇತನ ಕಡಿತ ಮಾಡಿದ್ದಾರೆ. ಆದರೆ ಅಲ್ಪಸಂಖ್ಯಾಕರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ದೂರಿದರು. ಗ್ಯಾರಂಟಿ ವಿಫಲ: ರಾಜ್ಯ ಸರಕಾರದ ಗ್ಯಾರಂಟಿ ಸಂಪೂರ್ಣ ವಿಫಲವಾಗಿದೆ. ಯುವನಿಧಿ ಯಾರಿಗೆ ಅಗತ್ಯ ವಿದೆಯೋ ಅವರಿಗೆ ನೀಡುತ್ತಿಲ್ಲ. 40 ಲಕ್ಷ ಪದವೀಧರರಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಪದವಿ ಪೂರೈಸಿದವರಿಗೆ ಮಾತ್ರ ಎನ್ನುತ್ತಿದ್ದಾರೆ. ಚುನಾವಣೆ ಮೊದಲು ಹೇಳಿದ್ದು ಒಂದು ಈಗ ಮಾಡುತ್ತಿರುವುದು ಇನ್ನೊಂದು ಎಂದು ಆರೋಪಿಸಿದರು.
Related Articles
Advertisement
ರಾಷ್ಟ್ರಪತಿಯವರಿಗೆ ಏಕವಚನ!ರಾಷ್ಟ್ರಪತಿಯವರನ್ನು ಏಕವಚನದಲ್ಲಿ ಕರೆದಿರುವ ಸಿದ್ದರಾಮಯ್ಯ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಏಕವಚನದಲ್ಲಿ ಕರೆಯುವ ಧೈರ್ಯ ಮಾಡುತ್ತಾರೆಯೇ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಮನೆ ಮನೆ ಕೇಸರಿ ಧ್ವಜ ಅಭಿಯಾನ
ಕುಂದಾಪುರ: ಮಂಡ್ಯದಲ್ಲಿ ಅನುಮತಿ ಪಡೆದು ಹಾಕಿದ ಓಂಕಾರದ ಕೇಸರಿ ಧ್ವಜವನ್ನು ಇಳಿಸುವ ಮೂಲಕ ಪ್ರಜಾಸತ್ತಾತ್ಮಕ ಸರಕಾರವೊಂದು ಮಾಡಬಾರದ ಉದ್ಧಟತನ ತೋರಿಸಿದೆ. ಟಿಪ್ಪು ಜಯಂತಿ ಆಚರಿಸುವ ಸರಕಾರ ಕೇಸರಿ ಧ್ವಜ ಇಳಿಸಿ ಅಟ್ಟಹಾಸ ಮೆರೆದಿದೆ. ಇದರ ಪರಿಣಾಮ ಮಂಡ್ಯದ ಮನೆ ಮನೆಗಳಲ್ಲಿ ಕೇಸರಿ ಧ್ವಜ ಹಾರಾಡಲಿದೆ. ಇದು ರಾಜ್ಯಾದ್ಯಂತ ಅಭಿಯಾನ ರೂಪದಲ್ಲಿ ವಿಸ್ತರಿಸುವ ಚಿಂತನೆಯಿದೆ ಎಂದು ಶ್ರೀನಿವಾಸ ಪೂಜಾರಿ ಕುಂದಾಪುರದಲ್ಲಿ ಹೇಳಿದರು. 40 ವರ್ಷಗಳಿಂದ ಖಾಸಗಿ ಕಟ್ಟೆಯಲ್ಲಿ ಧ್ವಜ ಹಾರಿಸಲಾಗುತ್ತಿತ್ತು. ನವೀಕರಣಕ್ಕೆ ಅನುಮತಿ ಪಡೆದು ಹನುಮಾನ್ ಧ್ವಜ ಹಾರಾಟಕ್ಕೆ ಪಂಚಾಯತ್ ಸರ್ವಾನುಮತದ ನಿರ್ಣಯ ಮಾಡಿ ಅನುಮೋದಿಸಿತ್ತು. ಹಾಗಿದ್ದರೂ ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಧ್ವಜ ಇಳಿಸಲಾಗಿದೆ. ಜಿಲ್ಲಾಧಿಕಾರಿ ಬೆಂಬಲಿಸಿದ್ದಾರೆ ಎಂದರು.