Advertisement

Kota: ಗರಿಕೆಮಠ ಕ್ಷೇತ್ರದಲ್ಲಿ ಅದ್ದೂರಿ ಗಣೇಶ ಚತುರ್ಥಿ ಸಂಪನ್ನ

08:44 PM Sep 08, 2024 | Team Udayavani |

ಕೋಟ: ಸಾಹೇಬ್ರಕಟ್ಟೆ ಸಮೀಪದ ಶ್ರೀ ಕ್ಷೇತ್ರ ಗರಿಕೇಮಠದ  ಅರ್ಕಗಣಪತಿ ದೇವಸ್ಥಾನದಲ್ಲಿ ಶನಿವಾರ (ಸೆ.7 ರಂದು) ಗಣೇಶ ಚತುರ್ಥಿ ವಿಜೃಂಭಣೆಯಿಂದ ಜರಗಿತು.

Advertisement

ಈ ಪ್ರಯುಕ್ತ ಗಣಹೋಮ, ವಿಶೇಷ ಪೂಜೆ ಮತ್ತು ಮಹಾಪೂಜೆ ನಡೆಯಿತು. ನೂರಾರು ಸಂಖ್ಯೆಯ ಭಕ್ತಾಧಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಅರ್ಕಗಣಪತಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಮುಖ್ಯಸ್ಥ ವೇದಮೂರ್ತಿ ರಾಮಪ್ರಸಾದ ಅಡಿಗ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸಾಹೇಬ್ರಕಟ್ಟೆ ಸಮೀಪ ಶಿರಿಯಾರ ಗ್ರಾಮದ ಗರಿಕೆಮಠದಲ್ಲಿರುವ ಅರ್ಕ ಗಣಪತಿ ದೇವಸ್ಥಾನ ಅತ್ಯಂತ ಕಾರಣಿಕವಾಗಿದ್ದು ದಕ್ಷಿಣ  ಭಾರತದಲ್ಲೇ ಅಪರೂಪದ ಆರ್ಕಗಣಪತಿಯ ಶಿಲಾಮಯ ವಿಗ್ರಹದ ಇಲ್ಲಿದೆ. ಇಲ್ಲಿನ ಅಡಿಗರ ಕುಟುಂಬಸ್ಥರು ಜ್ಯೋತಿಷ್ಯ, ವೇದ, ಪಾಂಡಿತ್ಯಕ್ಕೆ ಶತಮಾನದಿಂದ ಖ್ಯಾತರಾಗಿದ್ದಾರೆ.

ಹಲವು ರೀತಿಯ ಕಷ್ಟಗಳಿಂದ ನೊಂದು ಬಂದ ಭಕ್ತರು ಕ್ಷೇತ್ರವನ್ನು ಸಂದರ್ಶಿಸಿ, ಅಡಿಗರ ಸಲಹೆ ಯಿಂದ ಕಷ್ಟಪರಿಹಾರ ಮಾಡಿಕೊಳ್ಳುತ್ತಾರೆ. ಪ್ರತಿವರ್ಷ ಗಣೇಶ ಚತುರ್ಥಿ ಇಲ್ಲಿ ವಿಶೇಷವಾಗಿ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next