Advertisement

ಕೊರಿಯ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌; ಪ್ರಣಯ್‌ ಸವಾಲು ಅಂತ್ಯ

10:52 PM Jul 20, 2023 | Team Udayavani |

ಯೋಸು (ಕೊರಿಯ): ಭಾರತದ ಎಚ್‌.ಎಸ್‌. ಪ್ರಣಯ್‌ ಕೊರಿಯ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಕೂಟದ ದ್ವಿತೀಯ ಸುತ್ತಿನ ಕಠಿನ ಹೋರಾಟದಲ್ಲಿ ಸೋತು ಹೊರಬಿದ್ದಿದ್ದಾರೆ.

Advertisement

ಐದನೇ ಶ್ರೆಯಾಂಕದ ಪ್ರಣಯ್‌ ಅವರು ತೀವ್ರ ಪೈಪೋಟಿನ ಸೆಣ ಸಾಟದಲ್ಲಿ ಹಾಂಕಾಂಗ್‌ನ ಲೀ ಚೆಕ್‌ ಯು ಅವರೆದುರು 15-21, 21-19, 18-21 ಗೇಮ್‌ಗಳಿಂದ ಸೋಲನ್ನು ಕಂಡಿದ್ದಾರೆ.

ಪುರುಷರ ಇನ್ನೊಂದು ಸಿಂಗಲ್ಸ್‌ ಪಂದ್ಯದಲ್ಲಿ ಪ್ರಿಯಾಂಶು ರಾಜಾ ವತ್‌ ಅವರು ಜಪಾನಿನ ಕೊಡೈ ನರೋಕ ಅವರೆದುರು 14-21, 21-18, 17-21 ಗೇಮ್‌ಗಳಿಂದ ಶರಣಾದರು.

ವನಿತೆಯರ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ, ಗಾಯತ್ರಿ ಗೋಪಿಚಂದ್‌ ಅವರು ದಕ್ಷಿಣ ಕೊರಿಯದ ನ ಹ ಬಾಯೆಕ್‌ ಮತ್ತು ಹೀ ಸೊ ಲೀ ಅವರೆದುರು 11-21, 4-21 ಗೇಮ್‌ಗಳಿಂದ ಸೋತು ಹೊರಬಿದ್ದರು. ಮಿಕ್ಸೆಡ್‌ ಡಬಲ್ಸ್‌ ನಲ್ಲಿ ಭಾರತದ ರೋಹನ್‌ ಕಪೂರ್‌ ಮತ್ತು ಸಿಕ್ಕಿ ರೆಡ್ಡಿ ಅವರು ಚೈನೀಸ್‌ ತೈಪೆಯ ಝ ಯಾನ್‌ ಫೆಂಗ್‌ ಮತ್ತು ಪಿಂಗ್‌ ಡಾಂಗ್‌ ಹುವಾಂಗ್‌ ಅವರ ಕೈಯಲ್ಲಿ 15-21, 12-21 ಗೇಮ್‌ಗಳಿಂದ ಶರಣಾದರು.

Advertisement

Udayavani is now on Telegram. Click here to join our channel and stay updated with the latest news.

Next