Advertisement

ಯಾವುದೇ ಕ್ಷಣದಲ್ಲಿ ಗುವಾಮ್‌ ಮೇಲೆ ಉ.ಕೊರಿಯಾ ಅಟ್ಯಾಕ್‌

07:50 AM Aug 13, 2017 | |

ವಾಷಿಂಗ್ಟನ್‌: ಅಮೆರಿಕದ ಶಸ್ತ್ರಾಸ್ತ್ರ ಕೋಠಿ ಗುವಾಮ್‌ ಮೇಲೆ ಉತ್ತರ ಕೊರಿಯಾ ಯಾವುದೇ ಕ್ಷಣದಲ್ಲೂ ದಾಳಿ ನಡೆಸಬಹುದು ಎಂಬ ಸುಳಿವು ಸಿಕ್ಕಿದ್ದು, ಅಮೆರಿಕ ಕೂಡ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ. ಉತ್ತರ ಕೊರಿಯಾ ಕ್ಷಿಪಣಿ ದಾಳಿ ನಡೆಸಿದಾಗ ಆಗುವ ಅನಾಹುತಗಳಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗುವಾಮ್‌ ನಿವಾಸಿಗಳಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದೆ. 

Advertisement

ಜಗತ್ತಿನ ಎರಡು ಬೃಹತ್‌ ಶಕ್ತಿಗಳ ನಡುವೆ ಯುದ್ಧ ಸ್ಥಿತಿ ತಾರಕಕ್ಕೇರುತ್ತಿರುವ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ, ಗುವಾಮ್‌ ನಿವಾಸಿಗಳಿಗೆ “ಸುರಕ್ಷತಾ ಸಲಹೆ’ಗಳನ್ನು ನೀಡಿರುವುದು ಈಗ ಕುತೂಹಲ ಕೆರಳಿಸಿದೆ. “ಸನ್ನಿಹಿತ ಕ್ಷಿಪಣಿ ಬೆದರಿಕೆಗೆ ಸಿದ್ಧತೆಗಳು’ ಎಂಬ ಶೀರ್ಷಿಕೆಯಡಿ ಗುವಾಮ್‌ನ ನಾಗರಿಕ ರಕ್ಷಣಾ ಕಚೇರಿಯು ಸಿದ್ಧತಾ ಮಾರ್ಗದರ್ಶಿಯೊಂದನ್ನು ಬಿಡುಗಡೆ ಮಾಡಿದ್ದು, “ಸ್ಫೋಟ ಸಂಭವಿಸಿದಾಗ ಜ್ವಾಲೆಯತ್ತ ನೋಡಬೇಡಿ, ಅದು ಕಣ್ಣುಗಳನ್ನು ಕುರುಡಾಗಿಸಬಹುದು,’ ಎಂದು ಎಚ್ಚರಿಸಿದೆ. ಹಾಗೇ ದಾಳಿ ನಡೆದ ಸಂದರ್ಭದಲ್ಲಿ ಕಾಂಕ್ರೀಟ್‌ ಕಟ್ಟಡದಲ್ಲಿ ಅವಿತುಕೊಳ್ಳಿ, ನೆಲ ಮಾಳಿಗೆ ಯಲ್ಲಿ ಅವಿತರೆ ಹೆಚ್ಚು ಸುರಕ್ಷಿತ,’ ಎಂದು  ಸಲಹೆ ನೀಡಿದೆ.

ಮತ್ತೆ ಚೀನ ಶಾಂತಿ ಸಂದೇಶ: “ಈಗಾಗಲೇ ಪರಿಸ್ಥಿತಿ ವಿಕೋಪದತ್ತ ಹೊರಟಿದ್ದು, ಅಮೆರಿಕ ಹಾಗೂ ಉತ್ತರ ಕೊರಿಯಾ ಯಾವುದೇ ಕಾರಣಕ್ಕೂ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಇಂಥ ಹೇಳಿಕೆಗಳ ಮೂಲಕ ಶಾಂತಿ ಕದಡಬಾರದು,’ ಎಂದು ಚೀನ ಮತ್ತೂಮ್ಮೆ ಎರಡೂ ದೇಶಗಳನ್ನು ಕೋರಿದೆ. ಇನ್ನೊಂದೆಡೆ ಅಮೆರಿಕ ಮೇಲೆ ದಾಳಿ ನಡೆಸಿದರೆ ತಾನು ನೆರವಿಗೆ ಬರುವುದಿಲ್ಲ ಎಂದು ಉತ್ತರ ಕೊರಿಯಾಗೆ ಚೀನ ಎಚ್ಚರಿಕೆ ನೀಡಿದೆ. ಹಾಗೇ ಅಮೆರಿಕವೇನಾದರೂ ಮೊದಲು ದಾಳಿ ನಡೆಸಿದರೆ ತಾನು ಮಧ್ಯಪ್ರವೇಶಿಸುವುದು ಅನಿವಾ ರ್ಯ  ವಾ ಗಲಿದೆ ಎಂದೂ ಚೀನ ಪುನರುಚ್ಚರಿಸಿದೆ.

ಭಯವನ್ನು ಮರೆಮಾಚಿ “ಕೂಲ್‌’ ಎಂದ ಜನ
ಯಾವ ಕ್ಷಣದಲ್ಲಾದರೂ ಉತ್ತರ ಕೊರಿಯಾದ ಪ್ರಬಲ ಕ್ಷಿಪಣಿಗಳು ಬಂದು ನಮ್ಮೂರಲ್ಲಿ ಅಪ್ಪಳಿಸಬಹುದು ಎಂಬ ಭೀತಿ ಮನದಲ್ಲಿ ಮನೆ ಮಾಡಿದ್ದರೂ, ಗುವಾಮ್‌ನ ಜನ ಮಾತ್ರ ಅದನ್ನು ಮುಚ್ಚಿಟ್ಟುಕೊಂಡು, “ಕೂಲ್‌’ ಆಗಿ ರು  ವಂತೆ ವರ್ತಿಸುತ್ತಿದ್ದಾರೆ. ಇದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಇಲ್ಲಿನ ಆಡಳಿತವು ಜನರಿಗೆ ಅಲರ್ಟ್‌ ಆಗಿರುವಂತೆ ಘೋಷಿಸಿದ ಬೆನ್ನಲ್ಲೇ ನಾಗರಿಕರು ಮಾರುಕಟ್ಟೆ, ಮಾಲ್‌ಗ‌ಳಿಗೆ ಧಾವಿಸಿ, ನೀರಿನ ಬಾಟಲಿಗಳು, ಟಾರ್ಚ್‌ ಲೈಟ್‌ಗಳು, ಹಾಲು-ಹಣ್ಣು , ಟಾರ್ಪಾಲು ಮತ್ತಿತರ ಅಗತ್ಯ ವಸ್ತುಗ ಳನ್ನು ಖರೀದಿಸತೊಡಗಿದ್ದಾರೆ. ಅವರನ್ನು ಈ ಬಗ್ಗೆ ಪ್ರಶ್ನಿಸಿ ದರೆ, “ನಮಗೇನೂ ಭಯವಿಲ್ಲ. ನಾವು ಕೂಲ್‌ ಆಗಿದ್ದೇವೆ. ಇವೆಲ್ಲವನ್ನೂ ಸಾಮಾನ್ಯ ದಿನಗ ಳಲ್ಲೂ ಖರೀದಿಸುತ್ತೇವೆ,’ ಎನ್ನುತ್ತಾ ಏನನ್ನೋ ಮುಚ್ಚಿಡಲು ಯತ್ನಿಸಿದಂತೆ ಉತ್ತರಿಸುತ್ತಿ ದ್ದಾರೆ ಎಂದು ಪೆಸಿಫಿಕ್‌ ಡೈಲಿ ನ್ಯೂಸ್‌ ವರದಿ ಮಾಡಿದೆ.

ಸುರಕ್ಷತಾ ಸಲಹೆಗಳೇನು?
ದೇಹದಿಂದ ರೇಡಿಯೋಆಕ್ಟಿವ್‌ ಅಂಶಗ ಳನ್ನು ತೊಡೆದುಹಾಕಬೇಕು. ಇದಕ್ಕಾಗಿ ಸಾಧ್ಯವಾದಷ್ಟು ಹೆಚ್ಚು ಸೋಪು ಹಚ್ಚಿಕೊಂಡು ಸ್ನಾನ ಮಾಡಿ. 

Advertisement

ಚರ್ಮದ ಮೇಲೆ ತರಚುಗಾಯ ಮಾಡಿ ಕೊಳ್ಳಬೇಡಿ ಮತ್ತು  ಉಜ್ಜಬೇಡಿ. 

ತಲೆಗೆ ಕಂಡೀಷ°ರ್‌ ಬಳಸಬೇಡಿ.  ಕಂಡೀಷ°ರ್‌ ಬಳಸಿದಾಗ ರೇಡಿಯೋಆಕ್ಟಿವ್‌ ಅಂಶಗಳು ಕೂದಲಿಗೆ ಅಂಟಿಕೊಳ್ಳುತ್ತವೆ.

ಸ್ಫೋಟ ಸಂಭವಿಸಿದಾಗ ಜ್ವಾಲೆಯತ್ತ ನೋಡ ಬೇಡಿ, ಕಣ್ಣು ಕುರುಡಾಗಬಹುದು.

ದಾಳಿ ನಡೆದಾಗ ನೆಲ ಮಾಳಿಗೆಯಲ್ಲಿ ಅವಿತರೆ ಹೆಚ್ಚು ಸುರಕ್ಷಿತ.

ನಾನು ಮತ್ತೆ ಮತ್ತೆ ಎಚ್ಚರಿಕೆ ಕೊಡುತ್ತಿದ್ದೇನೆ. ನಮ್ಮ ಭೂಪ್ರದೇಶದ ತಂಟೆಗೇನಾದರೂ ಬಂದರೆ, ಉತ್ತರ ಕೊರಿಯಾವು ಅದಕ್ಕೆ ತಕ್ಕ ಪ್ರತಿಫ‌ಲ ಎದುರಿಸಬೇಕಾಗುತ್ತದೆ.
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.