ಕೊರಟಗೆರೆ: ಪ್ರತಿ ವರ್ಷ ಜುಲೈ4 ರಂದು ಹಲಸಿನ ದಿನವಾಗಿ ಆಚರಣೆ ಮಾಡುವ ಸಂಪ್ರದಾಯ ಕೆಲವು ವರ್ಷಗಳಿಂದ ಪ್ರಾರಂಭವಾಗಿದೆ. ಆಸಕ್ತರು ಬೆಳೆಗಾರರು ಶುಭಾಶಯ ವಿನಿಮಯ ಮಾಡಿಕೊಂಡ ಖುಷಿ ಪಡುತ್ತಾರೆ.
ವಾಣಿಜ್ಯ ಬೆಳೆಯಾಗಿ ಪರಿವರ್ತನೆಯಾಗಿದ್ದ ಹಲಸು 6 ವರ್ಷಗಳ ನಂತರ ತೀವ್ರವಾಗಿ ಬೆಲೆ ಕುಸಿತ ಕಂಡು ಖರೀದಿದಾರರು ಇಲ್ಲದೇ ನೆಲಕ್ಕೆ ಬಿದ್ದು ಹಾಳಾಗುತ್ತಿದೆ.
ತೋವಿನಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿ ವರ್ಷ 400 ಟನ್ ಹಲಸು ಬೆಳೆಯಲಾಗುತ್ತದೆ. 250 ಟನ್ ಗೂ ಹೆಚ್ಚು ಎಳೆಕಾಯಿ ಹಾಗೂ 150 ಟನ್ ಗೂ ಹೆಚ್ಚು ಹಣ್ಣಿನ ಕಾಯಿ ಕಾಯಿ ಮಾರಾಟವಾಗುತ್ತದೆ.ಕೊರೊನಾ ಪ್ರಾರಂಭವಾದ ನಂತರ ಮಾರಾಟ ತೀವ್ರವಾಗಿ ಕುಸಿತವಾಗಿದೆ.
ಖರೀದಿ ಮಾಡುವವರು ಮತ್ತು ಹಲಸಿನ ಗಿಡದ ಕಾಯಿ ನೋಡಿ ಬೆಲೆ ಕಟ್ಟುತ್ತಾರೆ.ನೂರಾರು ಕಾಯಿಗಳಿರುವ ಎಳೆಕಾಯಿ ಇರುವ ಮರ 500 ರಿಂದ 1000 ರೂಗೆ ಮಾರಾಟವಾಗುತ್ತಿದೆ. ಬಲಿತ ಕಾಯಿ ಇದ್ದರೆ ಎರಡರಷ್ಟು ಬೆಲೆಗೆ ಖರೀದಿ ಮಾಡುತ್ತಾರೆ.
ಮಧ್ಯವರ್ತಿಗಳು ಹಲಸನ್ನು ತೂಕದಲ್ಲಿ ಖರೀದಿಸದೇ ಮಾರಾಟ ಮಾಡುವಾಗ ಕೆ.ಜಿ. ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ.ಕರಾವಳಿ ಮತ್ತು ಮಲೆನಾಡಿನಲ್ಲಿ ನಡೆಯುತ್ತಿರುವ ಹಲಸು ಮೇಳದಲ್ಲಿ ತುಮಕೂರು ಕಡೆಯವರು ಬಲಿತ ಹಲಸಿನ ಕಾಯಿ ಕೆ.ಜಿಗೆ 25ರಿಂದ 40ರೂವರೆಗೆ ಮಾರಾಟ ಮಾಡುತ್ತಾರೆ.
100 ಕಾಯಿ ಬಿಟ್ಟಿರುವ ಹಲಸಿನ ಮರದಿಂದ ಮೌಲ್ಯವರ್ಧನೆ ಮಾಡಿ ಮನೆಯಲ್ಲಿ ಉಪಯೋಗ ಮಾಡಿ ಪ್ರತಿ ವರ್ಷ 20 ಸಾವಿರ ಉಳಿಸಬಹುದು
ಎಳೆ ಕಾಯಿ, ಹಣ್ಣು, ಹಣ್ಣಿನ ತೊಳೆ ಬೀಜದಿಂದ ನೂರಾರು ರೀತಿಯ ಖಾದ್ಯ ಮಾಡಬಹುದು ಎನ್ನುತ್ತಾರೆ ಹಳ್ಳಿಸಿರಿ ಕಾರ್ಯದರ್ಶಿ ಜಿ.ಎಲ್ ಸುನೀತಾ.