ಕೊರಟಗೆರೆ: ಪಟ್ಟಣದ ಊರ್ಡಿಗೆರೆ ಕ್ರಾಸ್ ಹತ್ತಿರ ಬಿಜೆಪಿ ಪಕ್ಷದ ಜನ ಸಂಪರ್ಕ ಕಚೇರಿ , ಹಾಗೂ ಜನಸೇವಾ ಕೇಂದ್ರದ ಉದ್ಘಾಟನೆಯನ್ನು ಡಿಸೆಂಬರ್ 2 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಕೆ. ಎಂ. ಮುನಿಯಪ್ಪ ಹೇಳಿದರು.
ಅವರು ಇಂದು ಕೊರಟಗೆರೆ ಪಟ್ಟಣದಲ್ಲಿ ಕರೆದಿದ್ದ ಬಿಜೆಪಿ ಪಕ್ಷದ ಕಾರ್ಯ ಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೊರಟಗೆರೆಯಲ್ಲಿ ಬಿಜೆಪಿ ಪಕ್ಷದ ಅಲೆಯಿದೆ,ಉತ್ತಮ ವಾಗಿ ಕೆಲಸ ಮಾಡಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸೋಣ ಎಂದರು.
ತಾಲೂಕಿನ ಬಿಜೆಪಿ ಕಾರ್ಯಕರ್ತರು ಕೊರಟಗೆರೆ ಪಟಣಕ್ಕೆ ಬಂದರೆ ಅವರು ಕೂತು ಪಕ್ಷದ ಬಗ್ಗೆ ಚರ್ಚಿಸಲು ಒಂದು ಕಚೇರಿ ಅಗತ್ಯವಿದೆ, ಈ ಸದ್ದುದ್ದೇಶದ ಜೊತೆಗೆ ಪಹಣಿ,ಮ್ಯುಟೇಷನ್,ಕಾರ್ಮಿಕ ಕಾರ್ಡ್ ಸೇರಿದಂತೆ ಇತರ ಸೌಲಭ್ಯ ಗಳನ್ನು ಜನಸೇವಾ ಕೇಂದ್ರದ ಮೂಲಕ ಉಚಿತವಾಗಿ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಡಿಸೆಂಬರ್ 2ರಂದು ನಡೆಯುತ್ತಿರುವ ಕಚೇರಿ ಪ್ರಾರಂಭೋತ್ಸವಕ್ಕೆ ಸಮಾರು 20 ಸಾವಿರ ಜನರನ್ನು ಸೇರಿಸುವ ಉದ್ದೇಶವಿದೆ ,ಕಚೇರಿ ಪ್ರಾರಂಭದ ಜೊತೆಗೆ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಸಹ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಜ್ಯ ,ಜಿಲ್ಲಾ ,ತಾಲೂ ಕು ಮುಖಂಡರು , ಸೇರಿದಂತೆ ವಿವಿಧ ಘಟಕಗಳ ಪ್ರಮುಖರು ಪದಾಧಿಕಾರಿಗಳು ಪಾಲ್ಗೊಳ್ಳುವರೆಂದು ಕೆ.ಎಂ. ಮುನಿಯಪ್ಪ ಮಾಹಿತಿ ನೀಡಿದರು.
Related Articles
ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾಕಾರ್ಯಕಾರಿಣಿ ಸದಸ್ಯ ಕೆಟಿ ಗೋವಿಂದರೆಡ್ಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್,ತಾಲೂಕು ಉಪಾಧ್ಯಕ್ಷ ಡಿ.ಎನ್ . ರವಿಶಂಕರ್, ಕೋಳಾಲ ಹೋಬಳಿಯ ಅಧ್ಯಕ್ಷ ಅಳಾಲಸಂದ್ರ ಮಂಜಣ್ಣ, ಕಾರ್ಮಿಕ ಮುಖಂಡ ಸೂರ್ಯನಾರಾಯಣ ಗೌಡ, ಸಾಗೇರೆ ಚಂದ್ರಶೇಖರಯ್ಯ ಹಂಚಿಹಳ್ಳಿ ರವಿಕುಮಾರ್,ಕ್ಯಾಮೇನಹಳ್ಳಿ ಬಾಲರಾಜು,ಪಾತಗನಹಳ್ಳಿ ಸಿದ್ದಲಿಂಗಯ್ಯ ಕೋಳಾಲ ಕಾರ್ತಿಕ್, ಮಾತನಾಡಿ ಕಾರ್ಯಕ್ರಮದ ರೂಪುರೇಷೆ ಗಳ ಬಗ್ಗೆ ಚರ್ಚಿಸಿ ಹಲವು ಸಲಹೆ ಸೂಚನೆಗಳನ್ನು ನೀಡುವ ಜೊತೆಗೆ ಹೋಬಳಿ ಮಟ್ಟ ಹಾಗೂ ಬೂತ್ ಮಟ್ಟದ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಸಜ್ಜುಗೊಳಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಂಕೇನಹಳ್ಳಿ ಹನುಮಂತರಾಯಪ್ಪ,ಮೇಡಿಕಲ್ ಹನುಮಂತು, ಆನಂದ್ ಬಿ.ಆರ್, ಸೇರಿದಂತೆ ಆರು ಹೋಬಳಿಗಳಿಂದ ನೂರಾರು ಕಾರ್ಯಕರ್ತರು ಆಗಮಿಸಿ ಪೂರ್ವಭಾವಿ ಸಭೆ ಯಶಸ್ವಿಗೊಳಿಸಿದರು.