Advertisement
ಪಟ್ಟಣದ ಎಸ್‍ಎಸ್‍ಆರ್ ವೃತ್ತದಲ್ಲಿ ಮುಂಜಾನೆ 6 ರಿಂದಲೇ ವಿದ್ಯಾರ್ಥಿಗಳು ಬಸ್‍ಗಾಗಿ ಕಾಯುತ್ತಿರುತ್ತಾರೆ. ಕಾರಣ ಬಸ್ ಪ್ರಯಾಣಿಕರು ಹೆಚ್ಚಾಗಿದ್ದರೆ ಬಸ್‍ನಲ್ಲಿ ಕಂಡಕ್ಟರ್ ಬಸ್‍ನಲ್ಲಿ ಹತ್ತಿಸೋಲ್ಲವೆಂದು ಒಂದು ಗಂಟೆಯ ಮುಂಚೆಯೇ ವಿದ್ಯಾರ್ಥಿಗಳು ಬಸ್‍ಗಾಗಿ ಕಾಯುವಂತಹ ಪ್ರಸಂಗ ಎದುರಾಗಿದೆ.
ಇವರ ಮಧ್ಯೆ ಬಡಕುಟುಂಬದ ಕೂಲಿ ಕಾರ್ಮಿಕ ಹೆಣ್ಣು ಮಕ್ಕಳು ಸಹ ಬಸ್‍ಗೆ ಪರದಾಡುತ್ತಿದ್ದು, ಅಧಿಕಾರಿಗಳು ಕಂಡರೂ ಕಾಣದಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ-ತಾಯಿಗಳು ಕೂಲಿ ಕೆಲಸ ಮಾಡಿಕೊಂಡು ನನ್ನ ತುಮಕೂರಿನ ಕಾಲೇಜಿನಲ್ಲಿ ಓದಿಸುತ್ತಿದ್ದಾರೆ. ಆದರೆ ನಮ್ಮಂತೆಯೇ ಅದೆಷ್ಟೋ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬಂದು ಪ್ರತಿನಿತ್ಯ ತುಮಕೂರಿನ ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ಸರಿಯಾಗಿ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲಾ, ಇದರಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಸಾಧ್ಯವಾಗದೆ ಖಾಸಗಿ ಬಸ್‍ನಲ್ಲಿ ಸಂಚರಿಸುವಂತಹ ಅನಿವಾರ್ಯತೆ ಎದುರಾಗಿದೆ ಎಂದು ಹೊಳವನಹಳ್ಳಿಯ ವಿದ್ಯಾರ್ಥಿನಿ ನಯನ ನೋವು ತೋಡಿಕೊಂಡಿದ್ದಾರೆ.
,
ಸಂಜೆಯೂ ಯಥಾಸ್ಥಿತಿ
ಪ್ರತಿನಿತ್ಯ ಬೆಳಗ್ಗೆ ಶಾಲೆಗಳಿಗೆ ತೆರಳಲು ಮತ್ತು ಸಂಜೆ ಸಮಯದಲ್ಲಿ ಮನೆಗೆ ತೆರಳಲು ಕೆಎಸ್‍ಆರ್‍ಟಿಸಿ ಬಸ್‍ಗಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ಸಮಸ್ಯೆಯ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆ, ಮಾಧ್ಯಮಗಳಲ್ಲಿ ಸುದ್ಧಿ ಬಿತ್ತರವಾದರೂ, ಅಧಿಕಾರಿಗಳು ಎಚ್ಚೆತುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂಷಿಸುತ್ತಿರುವುದು ಒಂದೆಡೆಯಾದರೆ ವಿದ್ಯಾರ್ಥಿಗಳು ಸಾರಿಗೆ ಬಸ್‍ಗಾಗಿ ಗಂಟೆ ಗಟ್ಟಲೆ ಖಾದು ಬಸ್ ಬಾರದ ಸಂದರ್ಭದಲ್ಲಿ ಕೇಳಿದಷ್ಟು ಹಣ ನೀಡಿ ಖಾಸಗಿ ವಾಹನಗಳೊಂದಿಗೆ ಮನೆಕಡೆ ಸಂಚರಿಸುತ್ತಿದ್ದು ಆಕಸ್ಮಿಕ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.