ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಅಜ್ಜಿಹಳ್ಳಿ ಗ್ರಾಮದ ಬಳಿ ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದ ಕಳ್ಳ ನೊರ್ವನನ್ನು ಗ್ರಾಮದ ಜನರ ನೆರವಿನೊಂದಿಗೆ ಪೋಲೀಸರು ಬಂಧಿಸಿರುವ ಘಟನೆ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯು ತಿಪ್ಪೇಶ್ ಬಿನ್ ಹನುಮಂತಪ್ಪ 33ವರ್ಷ ಮೂಲತಃ ಸಿರಾ ತಾಲೂಕಿನ ಭೂತಪ್ಪನ ದೇವಸ್ಥಾನದ ಗ್ರಾಮದವನಾಗಿದ್ದಾನೆ ಎಂದು ತಿಳಿದು ಬಂದಿದೆ.
ಎರಡು ವರ್ಷಗಳ ಹಿಂದೆ ಕೊರಟಗೆರೆ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಈ ಕಳ್ಳತನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದರು.
ಬಂಧಿತ ಆರೋಪಿಯು ತುಮಕೂರಿನ ಯಲ್ಲಾಪುರಜುವೆಲರಿ ಶಾಪ್ ನಲ್ಲಿ ಅಡವಿಟ್ಟಿದ್ದ ಎರಡು ಚೈನ್ 26ಗ್ರಾಂ ಚಿನ್ನದ ಒಡವೆಗಳ ಮೌಲ್ಯ 1ಲಕ್ಷ 25 ಸಾವಿರ ರೂ ನಗದು ಹಣ 9690ರೂ , ಒಂದು ಹೀರೊ ಹೊಂಡಾ ಬೈಕ್ ನ್ನು ವಶಪಡಿಸಿಕೊಳ್ಳಲು ಕೊರಟಗೆರೆ ಪೋಲಿಸರು ಯಶಸ್ವಿಯಾಗಿದ್ದಾರೆ .
ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಚಂದ್ರಕಲಾ ಮತ್ತುಸಿಬಂದಿಗಳಾದ ಮುಖ್ಯ ಪೇದೆ ವೆಂಕಟೇಶ್, ಜಗದೀಶ್, ಪೇದೆ ನರಸಿಂಹ ಮೂರ್ತಿ ಆರೋಪಿಯನ್ನು ಬಂಧಿಸಿದ್ದು ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣವನ್ನು ಭೇದಿಸಲು ಮಧುಗಿರಿ ಡಿವೈಎಸ್ ಪಿ ವಂಕಟೇಶ್ ನಾಯ್ಡ್ ರವರ ನಿರ್ದೇಶನದಲ್ಲಿ ಸಿಪಿಐ ಸುರೇಶ್. ಕೆ ರವರ ಮಾರ್ಗದರ್ಶನದಲ್ಲಿ
ಪಿಎಸ್ಐ ಪ್ರದೀಪ್ ಸಿಂಗ್ ಪಿಎಸ್ಐ ಚಂದ್ರಕಲಾ.ಎನ್ ರವರು ಕಳ್ಳತನ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ.ಜಿಲ್ಲಾ ಪೋಲಿಸ್ ಅಧೀಕ್ಷಕರಾದ ರಾಹುಲ್ ಕುಮಾರ್ ಶಹಾಪುರ್ ವಾಡ್ ಕೊರಟಗೆರೆ ಪೋಲಿಸ್ ಸಿಬಂದಿಗಳನ್ನು ಅಭಿನಂದಿಸಿದ್ದಾರೆ.