Advertisement

ಕೊರಟಗೆರೆ: 25 ಮಂದಿ ರೈತರ 40 ಎಕರೆ ಕೃಷಿ ಬೆಳೆ ಜಲಾವೃತ

10:39 PM Aug 08, 2022 | Team Udayavani |

ಕೊರಟಗೆರೆ: ಅಂತರ್ಜಲ ಅಭಿವೃದ್ದಿಗೆ ಗ್ರಾಮಕ್ಕೊಂದು ಕೆರೆಕಟ್ಟೆ ನಿರ್ಮಾಣ 40 ವರ್ಷದಿಂದ ಪುನಶ್ಚೇತನ ಮತ್ತು ಅಭಿವೃದ್ದಿಯೇ ಕಾಣದ ಕೆರೆಕಟ್ಟೆ.. ಕೆರೆ-ಕಟ್ಟೆಗಳ ರಕ್ಷಣೆಗೆ ಸರಕಾರ ಮತ್ತು ಅಧಿಕಾರಿಗಳ ಪಾತ್ರವೇನು.. ಕೆರೆಯ ಏರಿ-ಕೋಡಿ ಮತ್ತು ಕಾಲುವೆಗಳ ರಕ್ಷಣೆ ಯಾರ ಹೊಣೆ ಎಂಬುದೇ ಗ್ರಾಮೀಣ ಪ್ರದೇಶದ ರೈತರಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

Advertisement

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ಪುರಾತನ ಕೆರೆಯು ಸತತ ಎರಡು ವರ್ಷಗಳಿಂದ ಭರ್ತಿ ಆಗುತ್ತೀದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತೀರುವ ವರುಣ ಕೃಪೆಯಿಂದ ಕೆರೆಯು ಕೋಡಿಬಿದ್ದು ರಾಜಕಾಲುವೆಯ ಏರಿಯು ಹೊಡೆದು 25ಕ್ಕೂ ಅಧಿಕ ರೈತರ ೪೦ಎಕರೇ ಕೃಷಿ ಜಮೀನು ಜಲಾವೃತವಾಗಿದೆ.

ಗೌರಗಾನಹಳ್ಳಿ ಅಕ್ಕಪಕ್ಕ ನೂರಾರು ರೈತರ ಜೀವನಾಡಿ ಆಗಿರುವ ಕೆರೆಯು ತುಂಬಿರುವ ಪರಿಣಾಮ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಏರಿಕೆಯಾಗಿ ಜಾನುವಾರು ಮತ್ತು ಪ್ರಾಣಿಪಕ್ಷಿಗಳಿಗೆ ನೀರಿನ ಅನುಕೂಲ ಕಲ್ಪಿಸಿದೆ. ಕೆರೆಯ ಆವರಣದಲ್ಲಿ ಸೀಮೆ ಜಾಲಿಯ ಮರಗಳು ಬೆಳೆದು ನಿಂತಿವೆ. ಕೆರೆಯ ಏರಿಯಲ್ಲಿ ಪೊದೆಗಳು ಬೆಳೆದು ದಾರಿಯೇ ಕಾಣೆಯಾಗಿ ಕೋಡಿಯು ಸಹ ಶಿಥಿಲವಾಗಿದೆ. ಅದರ ಜೊತೆಯಲ್ಲಿ ಈಗ ರಾಜಕಾಲುವೆ ಹೊಡೆದು ರೈತರಿಗೆ ಸಮಸ್ಯೆ ಎದುರಾಗಿದೆ.

ಗೌರಗಾನಹಳ್ಳಿ ಕೆರೆಯ ಸಂರಕ್ಷಣೆ ಮತ್ತು ಅಭಿವೃದ್ದಿಯಲ್ಲಿ ಸ್ಥಳೀಯ ಹುಲೀಕುಂಟೆ ಗ್ರಾಪಂ ಸಂಪೂರ್ಣ ವಿಫಲವಾಗಿದೆ. ಕೆರೆಯ ಏರಿಯ ದುರಸ್ಥಿ ಮತ್ತು ರಾಜಕಾಲುವೆ ಅಭಿವೃದ್ದಿಗೆ ಗ್ರಾಪಂಯಲ್ಲಿ ನರೇಗಾ ಅನುಧಾನ ಲಭ್ಯವಿದೆ. ಕೊರಟಗೆರೆ ತಾಪಂ ಇಓ ಮತ್ತು ಹುಲೀಕುಂಟೆ ಗ್ರಾಪಂ ಪಿಡಿಓ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕೆರೆಯ ಸಮಗ್ರ ಅಭಿವೃದ್ದಿಗೆ ಆದ್ಯತೆ ನೀಡಬೇಕಿದೆ.

ರಾಜಕಾಲುವೆ ಮತ್ತು ಕೆರೆಯ ಏರಿಯು ಅಭಿವೃದ್ದಿ ಕಾಣದೇ ರೈತರಿಗೆ ಸಮಸ್ಯೆಯಾಗಿದೆ. ಮಳೆರಾಯನ ಆರ್ಭಟದಿಂದ ರಾಜಕಾಲುವೆ ಹೊಡೆದು ಕೆರೆಯ ನಿರೇಲ್ಲ ರೈತರ ಕೃಷಿ ಜಮೀನಿಗೆ ಹರಿಯುತ್ತೀದೆ. ಕಂದಾಯ ಮತ್ತು ಗ್ರಾಪಂ ರಾಜಕಾಲುವೆ ದುರಸ್ಥಿಗೊಳಿಸಿ ತಕ್ಷಣ ರೈತರ ನೆರವಿಗೆ ಬರಬೇಕಿದೆ.
ಅಂಜನಮೂರ್ತಿ. ರೈತ ಗೌರಗಾನಹಳ್ಳಿ

Advertisement

ವರುಣನ ಆರ್ಭಟದಿಂದ ರಾಜಕಾಲುವೆ ಶಿಥಿಲವಾಗಿ ಕೆರೆಯ ನೀರಿನಲ್ಲಿ ರೈತರ ಜಮೀನು ಮತ್ತು ಸ್ಮಶಾನ ಮುಳುಗಿದೆ. ರೈತಾಪಿವರ್ಗ ಬಿತ್ತನೆ ಮಾಡಿದ್ದ ಬೆಳೆಯು ನೀರಿನಲ್ಲಿ ಮುಳುಗಿ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಅಧಿಕಾರಿವರ್ಗ ತಕ್ಷಣ ನಮ್ಮ ಗ್ರಾಮದ ರಾಜಕಾಲುವೆ ಮತ್ತು ಕೆರೆಯ ಏರಿಯ ರಕ್ಷಣೆ ಮಾಡಬೇಕಿದೆ.
ಶಿವಶಂಕರ್ ಸ್ಥಳೀಯ, ಗೌರಗಾನಹಳ್ಳಿ.

ಗೌರಗಾನಹಳ್ಳಿ ಕೆರೆಯ ರಾಜಕಾಲುವೆ ಪರಿಶೀಲನೆ ನಡೆಸಲು ತಕ್ಷಣ ಹುಲೀಕುಂಟೆ ಪಿಡಿಓಗೆ ಸೂಚಿಸುತ್ತೇನೆ. ನರೇಗಾ ಯೋಜನೆಯಡಿ ಕೆರೆಯ ರಕ್ಷಣೆ ಮತ್ತು ಅಭಿವೃದ್ದಿಯ ಕಾಮಗಾರಿಗೆ ಅವಕಾಶವಿದೆ. ಕೆರೆಯ ಅಭಿವೃದ್ದಿ ಮತ್ತು ಪುನಶ್ಚೇತನ ಕಾಮಗಾರಿಗೆ ಜಿಪಂ ಎಇಇಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುತ್ತೇನೆ.
ದೊಡ್ಡಸಿದ್ದಯ್ಯ. ತಾಪಂ ಇಓ. ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next