Advertisement

Tulu cinema: ಇಂದು “ಕೊರಮ್ಮ” ತುಳು ಸಿನೆಮಾ ತೆರೆಗೆ

12:26 AM Aug 11, 2023 | Team Udayavani |

ಮಂಗಳೂರು: ತುಳುನಾಡ ಸಂಸ್ಕೃತಿ, ಆಚಾರ-ವಿಚಾರ, ನಡೆ- ನುಡಿ, ಜೀವನ ಪದ್ಧತಿ ಕುರಿತಂತೆ ಕುತೂಹಲ ಹುಟ್ಟಿಸುವ ಕಥೆ “ಕೊರಮ್ಮ’ ತುಳು ಸಿನೆಮಾ ಆ. 11ರಂದು ಮಂಗಳೂರು, ಸುರತ್ಕಲ್‌, ಪುತ್ತೂರು, ಪಡುಬಿದ್ರಿ ಮುಂತಾದ ಕಡೆಗಳ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ಶಿವಧ್ವಜ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸಫೈರ್‌ ಪ್ರೊಡಕ್ಷನ್‌ ಹೌಸ್‌ ನಿರ್ಮಾಣ ಸಂಸ್ಥೆಯ ಮೂಲಕ ಅಡ್ಯಾರು ಮಾಧವ ನಾಯ್ಕ ಅರ್ಪಿಸಿರುವ ಈ ಚಿತ್ರದ ಹಾಡಿನ ದೃಶ್ಯದಲ್ಲಿ ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ ಪ್ರತಿಬಿಂಬಿತ ವಾಗಿದೆ. ಹಿರಿಯರ ಕಾಲದ ಪರಿಕರ ಗಳನ್ನು ಸಿನೆಮಾದಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಈಗಾಗಲೇ ಪ್ರೀಮಿಯರ್‌ ಶೋ ನೋಡಿದವರು ಸಿನೆಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಕಾರ್ಕಳದ ಬೈಲೂರಿನ ಸುಂದರ ತಾಣದಲ್ಲಿ ಒಂದೇ ಹಂತದಲ್ಲಿ ಚಿತ್ರೀಕಣವಾಗಿರುವ “ಕೊರಮ್ಮ’ದಲ್ಲಿ ಗುರು ಹೆಗ್ಡೆ, ರೂಪಶ್ರೀ ವರ್ಕಾಡಿ, ಮೋಹನ್‌ ಶೇಣಿ, ಬಿಂದು ರಕ್ಷಿದಿ, ಜಿನಪ್ರಸಾದ್‌, ದಿವ್ಯಶ್ರೀ ನಾಯಕ್‌, ಲಕ್ಷ್ಮಣ್‌ ಕುಮಾರ್‌ ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್‌ ಜೋಡು ರಸ್ತೆ ಮುಂತಾದವರು ಅಭಿನಯಿಸಿದ್ದಾರೆ ಎಂದರು.

ಅಡ್ಯಾರು ಮಾಧವ ನಾಯ್ಕ, ಈಶ್ವರಿದಾಸ್‌ ಶೆಟ್ಟಿ ಮತ್ತು ರಾಜೇಶ್ವರ ರೈ ಚಿತ್ರದ ನಿರ್ಮಾಪಕರಾಗಿದ್ದಾರೆ. ಶಿನೋಯ್‌ ಎ. ಜೋಸೆಫ್‌ ಸಂಗೀತವನ್ನು, ಸುರೇಶ್‌ ಬೈರಸಂದ್ರ ಛಾಯಾಚಿತ್ರ ಗ್ರಹಣವನ್ನು, ಗಣೇಶ್‌ ನೀರ್ಚಾಲು ಸಂಕಲನವನ್ನು ನಡೆಸಿದ್ದಾರೆ. ಸಂಭಾಷಣೆ ಶ್ರೀನಿಧಿ ಭಟ್‌, ಅನುವಾದ ಮತ್ತು ಸಾಹಿತ್ಯ ಕೆ. ಮಹೇಂದ್ರನಾಥ್‌ ಸಾಲೆತ್ತೂರು, ಕಲೆ ಸಂತೋಷ ಪೂಜಾರಿ ವೇಣೂರು, ಸಹ ನಿರ್ದೇಶನ ಹರ್ಷೀವ ಭಗೀರ, ಪ್ರಸಾಧನ ಕುಮಾರ್‌ ನೊಣವಿನಕೆರೆ, ನಿರ್ಮಾಣ-ನಿರ್ವಹಣೆಯಲ್ಲಿ ವೀರೇಶ್‌ ಎಸ್‌.ಪಿ. ಮತ್ತು ಹಂಚಿಕೆ ದಾರರಾಗಿ ದೀಪಕ್‌ ಸಿನಿ ಗ್ಯಾಲಕ್ಸಿ ಇದ್ದಾರೆ ಎಂದರು. ಈಶ್ವರಿದಾಸ್‌ ಶೆಟ್ಟಿ, ಅಡ್ಯಾರ್‌ ಮಾಧವ ನಾಯ್ಕ, ದೀಪಕ್‌, ಗುರು ಹೆಗ್ಡೆ, ಮೋಹನ್‌ ಶೇಣಿ, ಬಿಂದು ರಕ್ಷಿದಿ, ರೂಪಶ್ರೀ ವರ್ಕಾಡಿ, ತಮ್ಮ ಲಕ್ಷ್ಮಣ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next