ಕೊಪ್ಪಳ: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಇದರ ಜೊತೆಗೆ, ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಕಾವೂ ಜೋರಾಗುತ್ತಿದೆ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ , ದೂರದೃಷ್ಟಿಯ ಜಪ ಮಾಡುತ್ತಿದ್ದರೆ, ಕಾಂಗ್ರೆಸ್ ಮಾತ್ರ, ಮೋದಿ ಕಪ್ಪು ಹಣ ತಂದಿಲ್ಲ. ನೀರಾವರಿ ಯೋಜನೆಗಳನ್ನೇ ಗಮನಿಸಿಲ್ಲ. ರೈತರ ಹಿತ ಕಾಯುವ ಬದಲು ಬಂಡವಾಳಶಾಹಿ ಹಿತ ಕಾಯುತ್ತಿದ್ದಾರೆ ಎನ್ನುವ ಆಪಾದನೆ ಮಾಡುತ್ತ ಪ್ರಚಾರ ನಡೆಸಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರ ಬರಪೀಡಿತ ಪ್ರದೇಶ. ಇಲ್ಲಿನ ನಾಯಕರಿಗೆ ಬರದ ತೀವ್ರತೆ ಗೊತ್ತಿದ್ದರೂ ಯಾವುದೇ ದೂರದೃಷ್ಟಿಯ ಯೋಜನೆಗಳ ಜಾರಿಗೆ ಶ್ರಮಿಸುತ್ತಿಲ್ಲ. ರೈತರ ಭೂಮಿಗೆ ಸಮರ್ಪಕ ನೀರಾವರಿ ಕಲ್ಪಿಸಲಾಗಿಲ್ಲ. ಆದರೂ ಸಹ ಪ್ರತಿ ಚುನಾವಣೆಯಲ್ಲಿ ನೀರಾವರಿಗೇ ನಮ್ಮ ಮೊದಲ ಆದ್ಯತೆ ಎನ್ನುತ್ತಿದ್ದಾರೆ. ಕೃಷ್ಣಾ “ಬಿ’ ಸ್ಕಿಂ ಜಾರಿ ಮಾಡಿ ಎನ್ನುವ ಕೂಗು ದಶಕಗಳಿಂದಲೂ ಕೇಳಿ ಬಂದರೂ ಕಮಲ-ಕೈ ನಾಯಕರು ಇದನ್ನೊಂದು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆಯೇ ವಿನ: ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿ ಮಾಡಿ, ಅನುದಾನವನ್ನು ಮೀಸಲಿಡುತ್ತಿಲ್ಲ. ಆನೆಗೆ ಅರೆಕಾಸಿನ ಗಂಜಿ ಎಂಬಂತೆ ಸಾವಿರಾರು ಕೋಟಿ ರೂ.ಅನುದಾನ ಬೇಕಿದ್ದರೂ 100-200 ಕೋಟಿ ರೂ.ಅನುದಾನ ನೀಡುತ್ತಿದ್ದಾರೆ. ಅದನ್ನೇಪ್ರಚಾರದಲ್ಲಿ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡು ನಾವು ನೀರಾವರಿ ಯೋಜನೆಗಳನ್ನು ಆರಂಭಿಸಿದ್ದೇವೆ ಎನ್ನುವ ಮಾತನ್ನಾಡಿ ಬೀಗುತ್ತಿದ್ದಾರೆ.
ಕಾಂಗ್ರೆಸ್ ಅಸ್ತ್ರ ಏನು?: ಈ ಹಿಂದೆ ಕಾಂಗ್ರೆಸ್ ನಾಯಕರು “ಕೃಷ್ಣೆಯ ಕಡೆಗೆ ನಮ್ಮ ನಡಿಗೆ’ ಪಾದಯಾತ್ರೆ ನಡೆಸಿ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದು ನೀರಾವರಿಯ ಭರವಸೆ ನೀಡಿದ್ದರು. ಆದರೆ, ಈ ಭಾಗದ ಜನರಿಗೆ ನೀರು ತಲುಪಿಲ್ಲ. ಕೃಷ್ಣಾ “ಬಿ’ ಸ್ಕಿಂಗಾಗಿ ಹೋರಾಟ ನಿಂತಿಲ್ಲ. ಪ್ರಧಾಮೋದಿಯವರು 5 ವರ್ಷ ಬರಿ ಸುಳ್ಳು ಭರವಸೆ ನೀಡುತ್ತಲೇ ಆಡಳಿತ ನಡೆಸಿದ್ದಾರೆ. ಜನ್‌ಧನ್ ಖಾತೆಯಡಿ ಜನರ ಖಾತೆಗೆ 15 ಲಕ್ಷ ರೂ.ಹಾಕುತ್ತೇನೆ ಎಂದಿದ್ದರು, ಇನ್ನೂ, ನಯಾಪೈಸೆ ಹಾಕಿಲ್ಲ. ಕಪ್ಪು ಹಣ ಏಲ್ಲಿದೆ?. ರೈತರ ಹಿತ ಕಾಯಬೇಕಿರುವ ಫಸಲ್‌ಬಿಮಾ ಯೋಜನೆಯ ಹಣ ಲಕ್ಷ ಕೋಟಿ ಲೆಕ್ಕದಲ್ಲಿ ಖಾಸಗಿ ವಿಮಾ ಕಂಪನಿಗಳ ಪಾಲಾಗಿದೆ. ರೈತರ ಬೆಳೆ ನಷ್ಟಶೇ.50ರಷ್ಟು ಲಾಭಾಂಶ ಕೊಡುವೆ ಎಂದಿದ್ದರು. ಅದನ್ನೂ ಮಾಡಿಲ್ಲ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆ ಇದ್ದರೂ ಅವುಗಳನ್ನು ಬಗೆಹರಿಸಿಲ್ಲ. ತುಂಗಭದ್ರಾ ಡ್ಯಾಂನ ಹೂಳು ತೆಗೆಯುವುದು, ಪರ್ಯಾಯ ವ್ಯವಸ್ಥೆ, ದೂರದೃಷ್ಟಿ ಯೋಜನೆಗಳನ್ನು ಮಾಡಿಯೇ ಇಲ್ಲ. ಕಾಲುವೆಗಳ ಅಭಿವೃದ್ದಿ ಸೇರಿದಂತೆ ಹಲವು ಕಾಮಗಾರಿಯಲ್ಲಿ ರಾಜ್ಯದ ಪಾಲು ಇದ್ದರೂ ನಮ್ಮ ಯೋಜನೆ ಎನ್ನುವ ರೀತಿಯಲ್ಲಿ ಾಡಿಕೊಳ್ಳುತ್ತಿರ ಕಾಂಗ್ರೆಸ್‌ಅಭ್ಯರ್ಥಿಗಳು ಮೋದಿ ವಿರುದಟಛಿ ವಾಗ್ಧಾಳಿ ನಡೆಸುತ್ತಾ, ಜನರಿಂದ ಮತ ಕೇಳಲು ಆರಂಭಿಸಿದ್ದಾರೆ.
ಬಿಜೆಪಿ ಬತ್ತಳಿಕೆಯ ಬಾಣ ಯಾವುದು?: ಬಿಜೆಪಿ ನಾಯಕರು ಮೋದಿ ಜಪ ಮುಂದುವರಿಸಿದ್ದಾರೆ. ಈ ಕ್ಷೇತ್ರಕ್ಕೆ ಅವರು ಹಲವು ರೈಲ್ವೆ ಗೇಟ್‌ಗಳಿಗೆ ಅನುಮೋದನೆ ಕೊಟ್ಟಿದ್ದಾರೆ. ನೂರಾರು ಕೋಟಿ ರೂ.ಹಣದ ನೆರವು ದೊರೆತಿದೆ. ಹೊಸಪೇಟೆ-ಹುಬ್ಬಳಿ ಅತಿ ದೊಡ್ಡ ಹೆದ್ದಾರಿ ಸೇರಿದಂತೆ ಹಲವು ಹೆದ್ದಾರಿ ಅಭಿವೃದ್ದಿಗೆ ಕೊಪ್ಪಳದಲ್ಲೇ ಉದ್ಘಾಟನೆ ಮಾಡಿಸಲಾಗಿದೆ. ಕೋತರ ಜನಕ್ಕೆ ಜನ್‌ಧನ್ ಖಾತೆ ತೆರೆದಿದ್ದಾರೆ. ಬೆಳೆ ನಷ್ಟಕ್ಕೆ ಫಸಲ್‌ಬಿಮಾ ಯೋಜನೆ ತಂದಿದ್ದು, ಉದ್ಯಮ ನಡೆಸಲು ಮುದ್ರಾ ಸ್ಕೀಂ ಜಾರಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಲೆ ಎತ್ತಿ ನಿಲ್ಲುವಂತೆ ಹಲವು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದೆ. ಆದರೂ, ಏನೂ ಅಭಿವೃದ್ದಿ ಮಾಡಿಲ್ಲ. ಅವರು ಅಭಿವೃದ್ದಿ ಮಾಡಿದ್ದರೆ ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಿತ್ತೇ ಎನ್ನುವ ಮಾತನ್ನಾಡುತ್ತಿದ್ದಾರೆ.
ದತ್ತು ಕಮ್ಮಾರ