ಗಂಗಾವತಿ: ಸ್ವಾತಂತ್ರ್ಯೋತ್ಸವ ನಿಮಿತ್ತ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ನೇತೃತ್ವದ ಅಧಿಕಾರಿಗಳು ತಾಲೂಕಿನ ಕೋಟಯ್ಯ ಕ್ಯಾಂಪ್‌ನಲ್ಲಿ ಭತ್ತದ ಸಸಿ ನಾಟಿ ಮಾಡಿ ಕೃಷಿಕರನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಭತ್ತವನ್ನು ಅತಿ ಹೆಚ್ಚು ಬೆಳೆಯುತ್ತಾರೆ. ಭತ್ತದಲ್ಲಿ ಹಲವಾರು ತಳಿಗಳಿವೆ.
ವೈಜ್ಞಾನಿಕ ಕೃಷಿ ಮಾಡುವ ಮೂಲಕ ಹೆಚ್ಚು ಇಳುವರಿ ಬರುವ ಮತ್ತು ರೋಗ ನಿರೋಧಕ ಭತ್ತದ ತಳಿಗಳನ್ನು ಬೆಳೆಯಬೇಕು. ಜತೆಗೆ ಡ್ರೋನ್ ಮೂಲಕ ಔಷಧ ಸಿಂಪರಣೆ ಮಾಡಬೇಕು. ಯಾಂತ್ರಿಕೃತ ಭತ್ತದ ನಾಟಿ ಮಾಡುವ ಮೂಲಕ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.
ದೇಶ ಅಭಿವೃದ್ಧಿಗೆ ಕೃಷಿ ಪೂರಕವಾಗಿದ್ದು, ಕೃಷಿಯಲ್ಲಿ ಆಧುನಿಕತೆಯನ್ನು ರೈತರು ಬಳಸಿಕೊಳ್ಳುವಂತೆ ಕರೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್, ಕೃಷಿ ಅಧಿಕಾರಿಗಳು ಮತ್ತು ಆತ್ಮ ಸಿಬ್ಬಂದಿ ರೈತರು ಕೃಷಿ ಇಲಾಖೆಯವರಿದ್ದರು.