Advertisement
ದಿನಕ್ಕೆ ನೂರಾರು ಲಾರಿಗಳು ಸರತಿ ಸಾಲಿನಲ್ಲಿ ಆಗಮಿಸಿ ನದಿ ದಂಡೆಯ ಉದ್ದಕ್ಕೂ ಮಣ್ಣು ತುಂಬಿಸಿ ಒತ್ತುವರಿ ಮಾಡಲಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್‌ನಿಂದ ಹಿಡಿದು ಹಳೆ ಕಟ್ಟಡ ಕೆಡವಿದ ಸಾಮಾನುಗಳು, ಗಾಜಿನ ಚೂರುಗಳು ರಾಶಿ ರಾಶಿಯಾಗಿ ನದಿ ಒಡಲು ಸೇರುತ್ತಿವೆ. ಇನ್ನೊಂದೆಡೆ ನದಿಯ ದಡದ ಉದ್ದಕ್ಕೂ ಇದ್ದ ಕಾಂಡ್ಲ ಗಿಡಗಳೂ ಮಣ್ಣು ರಾಶಿಯನ್ನು ಸೇರಿ ಮರೆಯಾಗುತ್ತಿವೆ. ಜನವರಿಯಲ್ಲಿ ಜಿಲ್ಲಾಧಿಕಾರಿಯವರಿಗೆ ದೂರುನೀಡಲಾಗಿದೆ. ಜಿಲ್ಲಾ ಧಿಕಾರಿ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ತತ್‌ಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಪಡುಕೋಡಿ ಬಂಗ್ರ ಕೂಳೂರು ಸಾಗಲು ಸರಿಯಾದ ರಸ್ತೆ ಇರಲಿಲ್ಲ. ಇದೀಗ ರಸ್ತೆ ಕಾಂಕ್ರೀಟ್ ಕಾಮಗಾರಿ ಜತೆಗೆ ವಿಸ್ತರಣೆಯೂ ಆಗಿದೆ. ಆದರೆ ಬೃಹತ್ ವಾಹನಗಳು ತಿರುವು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಾವುದೇ ಅನುಮತಿ ಪಡೆಯದೆ ಇದೀಗ ಹೆದ್ದಾರಿಯನ್ನು ಕೂಳೂರು ಮೇಲ್ಸೇತುವೆ ಬಳಿ ತುಂಡರಿಸಿ ಅಪಾಯಕಾರಿ ತಿರುವು ನಿರ್ಮಿಸಲಾಗಿದೆ. ಸಮೀಪವೇ ಶಾಲೆ, ಬಸ್ ನಿಲ್ದಾಣವಿರುವುದರಿಂದ ಜನನಿ ಬಿಡ ಪ್ರದೇಶವಾಗಿದೆ. ಇದರಿಂದ ಈ ಪ್ರದೇಶ ಅಪಘಾತವಲಯವಾಗುವ ಸಾಧ್ಯತೆಯಿದೆ.
Related Articles
ಕೂಳೂರು ಸಮೀಪ ಫಲ್ಗುಣಿ ನದಿಗೆ ಮಣ್ಣು ತುಂಬಿಸುವ ಬಗ್ಗೆ ಮಾಹಿತಿ ಬಂದಿದೆ. ಚುನಾವಣಾ ಕಾರ್ಯ ಒತ್ತಡವಿರುವುದರಿಂದ ಮುಗಿದ ಬಳಿಕ ಸಿಆರ್ ಝಡ್ ಟಾಸ್ಕ್ ಸಮಿತಿಗೆ ವರದಿ ನೀಡಲಾಗುವುದು. ಮಹಾನಗರ ಪಾಲಿಕೆಯೂ ಅತಿಕ್ರಮಣ ವಾಗಿದ್ದರೆ ತೆರವುಗೊಳಿಸುವ ಅಧಿಕಾರ ಹೊಂದಿದೆ.
– ಮಹೇಶ್,
ಮೀನುಗಾರಿಕಾ ಉಪನಿರ್ದೇಶಕರು
Advertisement