Advertisement

ಮಾಸ್ಕ್- ಸ್ಯಾನಿಟೈಸರ್‌ ವಿತರಣೆ

06:03 PM May 20, 2020 | Naveen |

ಕೂಡ್ಲಿಗಿ: ಪಟ್ಟಣದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ 4.0 ಆರಂಭವಾಗಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿಯಂತೆ ಬಸ್‌ ಸಂಚಾರಕ್ಕೆ ಅವಕಾಶವಿರಲಿದ್ದು ಹಳ್ಳಿಗಾಡಿನಿಂದ ಬರುವ ಜನರು ಮಾಸ್ಕ್ಗಳನ್ನು ಹಾಕಿ ಬಸ್‌ಗಳನ್ನು ಹತ್ತಬೇಕು ಎಂದು ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.

Advertisement

ಈ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರಿಗೆ 1000 ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿ ಮಾತನಾಡಿದರು. ಬಸ್‌ ಸಂಚಾರ ಮಾಡುವಾಗ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರಯಾಣಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ಬಳಕೆ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಡಾ| ವಿನಯ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು, ಬಂಗಾರು ಸೋಮಣ್ಣ, ವೀರನಗೌಡ್ರು, ಶಂಕರಣ್ಣ, ಜಯಮ್ಮರ ರಾಘವೇಂದ್ರ, ಜುಬೇರ್‌ ಕೊಂಡಯ್ಯರ್‌ ರಾಘು, ಗುರಿಕಾರ ರಾಘು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next