Advertisement

Konkani Movie ”ಅಸ್ಮಿತಾಯ್” ಸೆ.15 ರಂದು ಬಿಡುಗಡೆ ; ಗಮನ ಸೆಳೆದ ಟ್ರೇಲರ್

04:40 PM Aug 17, 2023 | Team Udayavani |

ಮಂಗಳೂರು: ಮಾಂಡ್ ಸೊಭಾಣ್ ನಿರ್ಮಾಣದ ಕೊಂಕಣಿ ಚಲನಚಿತ್ರ ”ಅಸ್ಮಿತಾಯ್” ಇದರ ಟ್ರೇಲರ್ ಬಿಡುಗಡೆ ಕಾರ್ಯಕ್ರಮವು ಆ.13 ರಂದು ಮಂಗಳೂರಿನ ಭಾರತ್ ಸಿನಿಮಾದಲ್ಲಿ ನಡೆಯಿತು. ಅನಿವಾಸಿ ಉದ್ಯಮಿ ರೊನಾಲ್ಡ್ ಪಿಂಟೊ ಇವರು ಡೋಲು ಬಾರಿಸುವ ಮೂಲಕ ಟ್ರೇಲರ್ ಬಿಡುಗಡೆ ಮಾಡಿದರು.

Advertisement

ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂತೇರೊ ಚಿತ್ರದ ಪೋಸ್ಟರ್ ಅನ್ನು ಹಾಗೂ ಇನ್ನೋರ್ವ ಕುಕ್ಕುಟ ಕ್ಷೇತ್ರದ ಮುಂಚೂಣಿ ಉದ್ಯಮ ಐಡಿಯಲ್ ಚಿಕನ್ಸ್ ಇದರ ಮಾಲಕ ವಿನ್ಸೆಂಟ್ ಕುಟಿನ್ಹಾ ಇವರು ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ನಿರ್ಮಾಪಕ ಲುವಿಸ್ ಜೆ ಪಿಂಟೊ ಪ್ರಸ್ತಾವಿಕವಾಗಿ ಮಾತನಾಡಿ, ‘’ಅದ್ದೂರಿಯಾಗಿ ನಿರ್ಮಾಣವಾದ ಚಿತ್ರದಲ್ಲಿ ಸಿನೆಮಾಕ್ಕೆ ಪೂರಕವಾದ ಎಲ್ಲಾ ಅಂಶಗಳಿದ್ದರೂ ಕೇವಲ ಸಿನೆಮಾವಾಗಿ ನಾವಿದನ್ನು ನಿರ್ಮಿಸಿಲ್ಲ. ಕೊಂಕಣಿ ಅಸ್ಮಿತೆಯ ಬಗ್ಗೆ ಜನರಿಗೆ ಮನವರಿಕೆ ಮಾಡಲು ‘ಚಲನಚಿತ್ರದಿಂದ ಚಳುವಳಿವರೆಗೆ’ ಎಂಬ ಉದ್ದೇಶವಿಟ್ಟು ಕೆಲಸ ಮಾಡಿದ್ದೇವೆ’’ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next