Advertisement

‘ಮ್ಹ್‌ಜೆ ಮ್ಲ ಖಾಲ್ಸ್‌ ನಿವಾರ್‌’ಕೊಂಕಣಿ ನಾಟಕಕ್ಕೆ ಮುಹೂರ್ತ

03:08 PM Sep 08, 2017 | |

ಮುಂಬಯಿ: ನಗರದ ಹಿರಿಯ ನಾಟಕಕಾರ ಜೋಸೆಫ್‌ ಡಿ’ಸೋಜಾ ಬೊರಿವಲಿ ರಚಿಸಿದ “ಮ್ಹ್‌ಜೆ ಮ್ಲ ಖಾಲ್ಸ್‌ ನಿವಾರ್‌’ ಕೊಂಕಣಿ ನಾಟಕಕ್ಕೆ ಸೆ. 2ರಂದು ಸಂಜೆ ದಹಿಸರ್‌ ಪಶ್ಚಿಮದ‌ ಸೈಂಟ್‌ ಲೂಯಿಸ್‌ ಚರ್ಚ್‌ ಸಭಾಗೃಹದಲ್ಲಿ ಮುಹೂರ್ತ ನಡೆಯಿತು.

Advertisement

ಅತಿಥಿಗಳಾಗಿ ಫ್ರಾನ್ಸಿಸ್‌ ಫೆರ್ನಾಂಡಿಸ್‌ ಕಾಸ್ಸಿಯಾ, ಲಿಯೋ ಫೆರ್ನಾಂಡಿಸ್‌ ಜೆರಿಮೆರಿ, ವಿಲಿಯಂ ಮಚಾದೋ  ಅವರು ಉಪಸ್ಥಿತರಿದ್ದು ನಾಟಕಕ್ಕೆ ಶುಭ ಹಾರೈಸಿದರು.
ಲಿಯೋ ಕುಟಿನೋ, ಜಾನೇಟ್‌ ಸಲ್ಡನ್ಹಾ, ಹೆಲೆನ್‌ ನೋರೊನ್ಹಾ, ಸಿರಿಲ್‌ ಮೋನಿಸ್‌, ಜುಲಿಯಾನ ಡಿ’ ಸೋಜಾ, ಜೋರ್ಜ್‌ ಸಿಕ್ವೇರ, ಹೆನ್ರಿ ಜೋರ್ಜ್‌ ಡಿ’ಸೋಜಾ, ಜೋಯ್‌ ಪಾಲಡ್ಕ ಅವರು ಸೇರಿದಂತೆ ನಾಟಕದ ಪಾತ್ರಧಾರಿಗಳು ಉಪಸ್ಥಿತರಿದ್ದರು.

ಜೋಸೆಫ್‌ ಡಿ’ಸೋಜಾ ಬೊರಿವಲಿ ಅವರು ರಚಿಸಿ ಪ್ರಸ್ತುತ ಪಡಿಸುವ ಈ ಮೂರನೇ ನಾಟಕವನ್ನು  ವಿಲಿಯಂ ಮಚಾದೋ ನಿರ್ದೇಶಿಸಲಿದ್ದಾರೆ. ಕೊಂಕಣಿ ಸಾಹಿತಿಕ್‌ ಸಂಘ… ಮುಂಬಯಿ ಪ್ರಸ್ತುತ ಪಡಿಸಲಿರುವ ನಾಟಕಕ್ಕೆ ಚಾರ್ಲ್ಸ್‌ ಡಿಕುನ್ಹಾ ಅವರು ಹಾಡುಗಳನ್ನು ರಚಿಸಿದ್ದು, ಬೆಂಜಮಿನ್‌  ಮಿರಾಂದ ಸಂಗೀತ ನೀಡಲಿದ್ದಾರೆ. 

 ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next