Advertisement
ಇತ್ತೀಚೆಗಷ್ಟೇ “ಉದಯವಾಣಿ’ ಪಟ್ಟಣದ ಕೊಂಗಳಕೆರೆ ಅಕ್ರಮ ಒತ್ತುವರಿಗೆ ಸಿಲುಕಿ ಕೆರೆ ಸಂಪೂರ್ಣ ನಾಶವಾಗುತ್ತಿದೆ ಎಂದು ವಿಶೇಷ ವರದಿ ಮಾಡಲಾಗಿತ್ತು. ಆದರೆ ವರದಿ ಆಧರಿಸಿಕೊಂಡು ಎಚ್ಚೆತ್ತುಕೊಳ್ಳಬೇಕಾಗಿದ್ದ ಕಬಿನಿ ನಾಲಾ ವಿಭಾಗದ ಅಧಿಕಾರಿಗಳು ಕೆರೆಯತ್ತ ಗಮನ ಹರಿಸದೆ ಇರುವುದು ಈಗ ಆಟೋಚಾಲಕರು ಒತ್ತುವರಿ ಮಾಡಿಕೊಂಡು ಆಟೋ ನಿಲ್ದಾಣಕ್ಕೆ ಮುಂದಾಗಿದ್ದಾರೆ.
Related Articles
Advertisement
ಕೆರೆ ಅಭಿವೃದ್ಧಿ ಪಡಿಸುವ ಇಂಗಿತ: ಸರ್ಕಾರ ಕೋಟ್ಯಂತರ ರೂ. ಹಣ ಖುರ್ಚ ಮಾಡಿ ಅಂರ್ತಜಲ ಅಭಿವೃದ್ಧಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪಟ್ಟಣದ ಪ್ರಮುಖದ ಐದು ಕರೆಗಳಲ್ಲಿ 15 ರಿಂದ 25 ವರ್ಷದಿಂದಲೂ ಊಳೆತ್ತದೆ ಇರುವುದರಿಂದ ಕೆರೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ. ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಬೇಕಾದ ಕೆರೆಗಳು ನಾಶವಾಗುತ್ತಿದೆ.
ಈ ಹಿಂದೆ ಶಾಸಕರಾಗಿದ್ದ ಎಸ್.ಜಯಣ್ಣ ಕೆರೆ ಅಭಿವೃದ್ಧಿಪಡಿಸಿ ವಾಯುವಿಹಾರ ಕೇಂದ್ರವನ್ನಾಗಿ ಮಾಡುವ ಮೂಲಕ ಸುಂದರತಾಣವನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು. ನಂತರ ಬಂದ ಶಾಸಕ ಎನ್.ಮಹೇಶ್ ಕೆರೆಯನ್ನು ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡಿ ಅಭಿವೃದ್ಧಿ ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಅಭಿವೃದ್ಧಿಪಡಿಸುವ ಬದಲು ಇರುವ ಕೆರೆಗಳನ್ನು ಉಳಿಸಿದರೆ ಸಾಕು ಎಂದು ಪರಿಸರ ಪ್ರೇಮಿಗಳ ಆಕ್ರೋಶವಾಗಿದ್ದು, ಕೂಡಲೇ ಅಧಿಕಾರಿಗಳು ಮತ್ತು ಚುನಾಯಿತ ಪ್ರತನಿಧಿಗಳು ಎಚ್ಚೆತ್ತು ಕೆರೆಗೆ ಕಾಯಕಲ್ಪ ನೀಡಬೇಕಾಗಿದೆ.
ಪಟ್ಟಣದ ಹೃದಯಭಾಗದಲ್ಲಿರುವ ಬೃಹತ್ತಾದ ಕೊಂಗಳಕೆರೆ ಸ್ಥಳವನ್ನು ಆಟೋ ನಿಲ್ದಾಣಕ್ಕಾಗಿ ಅಕ್ರಮ ಒತ್ತುವರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ಜನರಿಗೆ ತೊಂದರೆ ಕಂಡು ಬಂದ ಪಕ್ಷದಲ್ಲಿ ಕೂಡಲೇ ನಿಲ್ದಾಣವನ್ನು ತೆರವು ಮಾಡಲಾಗುವುದು.-ನಾಗಶೆಟ್ಟಿ, ನಗರಸಭೆ ಪೌರಾಯುಕ್ತ ಈ ಬಗ್ಗೆ ಇದುವರೆಗೂ ನಮ್ಮ ಗಮನಕ್ಕೆ ಬಂದಿರಲಿಲ್ಲ, ಕೂಡಲೇ ಕೆರೆ ಅಕ್ರಮ ಒತ್ತುವರಿಯನ್ನು ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿ ತೆರವು ಮಾಡಲಾಗುವುದು.
-ರಘು, ಕಾರ್ಯಪಾಲಕ ಅಭಿಯಂತರ * ಡಿ.ನಟರಾಜು