Advertisement

ಆಶಾ ಕಾರ್ಯಕರ್ತೆಯರಿಂದ ಹೊರ ಊರಿನವರ ಮಾಹಿತಿ ಸಂಗ್ರಹ

03:30 PM Jul 10, 2020 | Naveen |

ಕೊಂಡ್ಲಹಳ್ಳಿ: ಬೆಂಗಳೂರು ಇತರ ನಗರಗಳಿಂದ ಹಳ್ಳಿಗಳಿಗೆ ಬೈಕ್‌, ಆಟೋ, ಇತರೆ ವಾಹನಗಳಲ್ಲಿ ಜನರು ಆಗಮಿಸುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಡೇವು, ಕೊಂಡ್ಲಹಳ್ಳಿ, ಕೋನಸಾಗರ ಇತರೆ ಗ್ರಾಮಗಳಲ್ಲಿ ಬೆಂಗಳೂರು ಇತರೆಡೆಗಳಿಂದ ಬರುತ್ತಿರುವವರ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ಮಾಹಿತಿ ಪಡೆದು ತಪಾಸಣೆಗೆ ಆಸ್ಪತ್ರೆಗೆ ಕಳುಹಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

Advertisement

ಕೆಲವೆಡೆ ಸಾರ್ವಜನಿಕರು ಮಾಹಿತಿ ತಿಳಿಸಲು ಹಾಗೂ ಪರೀಕ್ಷೆಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಆರೋಗ್ಯ ಸಿಬ್ಬಂದಿಗೆ ಸಮಸ್ಯೆಯಾಯಗುತ್ತಿದೆ. ಆದರೂ ಛಲ ಬಿಡದೆ ಇಂತಹ ವೇಳೆ ಪೊಲೀಸರ ನೆರವನ್ನು ಪಡೆಯಲಾಗುತ್ತಿದೆ. ಕೊಂಡ್ಲಹಳ್ಳಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 35 ಜನರ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಕೊಂಡ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತ ಜಿ.ಟಿ. ಕುಮಾರ್‌, ಆಶಾ ಕಾರ್ಯಕರ್ತೆ ಚನ್ನವೀರಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next