Advertisement

ಧನುಷ್‌ ನಿರ್ದೇಶನದ ʼರಾಯನ್ʼ ರಿಲೀಸ್‌ಗೆ ಡೇಟ್‌ ಫಿಕ್ಸ್:‌ ತಪ್ಪಿದ ಬಾಕ್ಸ್‌ ಆಫೀಸ್‌ ಫೈಟ್

06:57 PM Jun 10, 2024 | Team Udayavani |

ಚೆನ್ನೈ: ಧನುಷ್‌ ಬಹು ಸಮಯದ ಬಳಿಕ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿರುವ ʼರಾಯನ್‌ʼ ಸಿನಿಮಾದ ಹೊಸ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Advertisement

ಈಗಾಗಲೇ ಫಸ್ಟ್‌ ಲುಕ್‌ ಪೋಸ್ಟರ್‌ನಿಂದ ಗಮನ ಸೆಳೆದಿರುವ ʼರಾಯನ್‌ʼ ಚಿತ್ರದ ರಿಲೀಸ್‌ ಡೇಟ್‌ ಈ ಹಿಂದೆಯೇ ಅನೌನ್ಸ್‌ ಆಗಿತ್ತು. ಜೂ.13 ರಂದು ಚಿತ್ರ ರಿಲೀಸ್‌ ಆಗಲಿದೆ ಎನ್ನಲಾಗಿತ್ತು. ಆದಾದ ಬಳಿಕ ಜುಲೈ ತಿಂಗಳಿನಲ್ಲಿ ಚಿತ್ರ ʼಇಂಡಿಯನ್‌ -2ʼ(ಜು.12 ರಂದು) ಚಿತ್ರದೊಂದಿಗೆ ರಿಲೀಸ್‌ ಆಗಲಿದೆ ಎನ್ನಲಾಗಿತ್ತು.

ಈ ಎರಡು ಚಿತ್ರಗಳು ಒಂದೇ ದಿನ ರಿಲೀಸ್‌ ಆಗುವ ಮೂಲಕ ಕಾಲಿವುಡ್‌ ನಲ್ಲಿ ಬಾಕ್ಸ್‌ ಆಫೀಸ್‌ ಫೈಟ್‌ ಉಂಟಾಗಲಿದೆ ಎನ್ನುವ ಮಾತುಗಳು ಹರಿದಾಡಿತ್ತು. ಇದೀಗ ಎಲ್ಲಾ ಗೊಂದಲಗಳಿಗೂ ʼರಾಯನ್‌ʼ ತೆರೆ ಎಳೆದಿದೆ.

ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ಜು.26 ರಂದು ʼರಾಯನ್‌ʼ ರಿಲೀಸ್‌ ಆಗಲಿದೆ ಎಂದು ʼಸನ್‌ ಪಿಕ್ಚರ್ಸ್‌ʼ  ಹೇಳಿದೆ. ಇಂಡಿಯನ್‌ -2 ರಿಲೀಸ್‌ ಆದ ಎರಡು ವಾರದ ಬಳಿಕ ʼರಾಯನ್‌ʼ ರಿಲೀಸ್‌ ಆಗಲಿದೆ.

ಇದು ಧನುಷ್‌ ಅವರ 50ನೇ ಸಿನಿಮಾವಾಗಿರಲಿದ್ದು, ಎ.ಆರ್‌ ರಹೆಮಾನ್‌ ಚಿತ್ರಕ್ಕೆ ಮ್ಯೂಸಿಕ್‌ ನೀಡಿದ್ದಾರೆ.

Advertisement

ಎಸ್.ಜೆ.ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಂ, ದುಶಾರ ವಿಜಯನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಸರವಣನ್ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next