ಚೆನ್ನೈ: ಕಮಲ್ ಹಾಸನ್ – ಶಂಕರ್ (Director Shankar) ಅವರ ಪ್ಯಾನ್ ಇಂಡಿಯಾ ʼಇಂಡಿಯನ್ -2ʼ ಇದೇ ವಾರ ರಿಲೀಸ್ ಆಗಲಿದೆ. ಇನ್ನೇನು ರಿಲೀಸ್ ಹೊಸ್ತಿಲಿನಲ್ಲಿರುವಾಗಲೇ ಸಿನಿಮಾಕ್ಕೆ ಬ್ಯಾನ್ ಬಿಸಿ ತಟ್ಟಿದೆ.
‘ಇಂಡಿಯನ್ 2’ ಚಿತ್ರ ತಂಡದ ವಿರುದ್ಧ ನಿಷೇಧ ಕೋರಿ ಪ್ರಕರಣವನ್ನು ದಾಖಲಿಸಲಾಗಿದೆ. ‘ವರ್ಮ ಕಲೈ’ [ತಮಿಳು ಸಾಂಪ್ರದಾಯಿಕ ಸಮರ ಕಲೆ ] ಮುಖ್ಯ ಶಿಕ್ಷಕ ಆಸನ್ ರಾಜೇಂದ್ರನ್ ಅವರು ಚಿತ್ರವನ್ನು ನಿಷೇಧ ಮಾಡಬೇಕೆಂದು ಕೇಳಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಕೇರಳದ ಮಾರ್ಷಲ್ ಆರ್ಟ್ ಶಿಕ್ಷಕರಾಗಿರುವ ಆಸನ್ ರಾಜೇಂದ್ರನ್, “ನಾನು ಕಮಲ್ ಹಾಸನ್ (Kamal Haasan) ಅವರಿಗೆ ʼಇಂಡಿಯನ್ʼ( ಪಾರ್ಟ್ -1) ಗೆ ʼವರ್ಮ ಕಲೈʼ ಕಲೆಯನ್ನು ಕಲಿಸಿದ್ದೇನೆ. ಈ ಕಲೆಯ ತಂತ್ರವನ್ನು ʼಇಂಡಿಯನ್ -2ʼ (Indian 2) ನಲ್ಲಿ ಕಮಲ್ ಹಾಸನ್ ಅವರು ಬಳಸಿಕೊಂಡಿದ್ದಾರೆ. ಚಿತ್ರತಂಡದ ಎರಡನೇ ಭಾಗದಲ್ಲಿ ನಾನು ಕಲಿಸಿದ ಕಲೆಯನ್ನು ಬಳಸಿಕೊಂಡಿದೆ. ಇದಕ್ಕೆ ನನ್ನ ಅನುಮತಿಯನ್ನು ಕೇಳಿಲ್ಲ. ಹೀಗಾಗಿ ಚಿತ್ರವನ್ನು ಬಿಡುಗಡೆಗೆ ಹಾಗೂ ಓಟಿಟಿ ರಿಲೀಸ್ ಗೂ ಅವಕಾಶ ನೀಡಬಾರದೆಂದು” ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಜುಲೈ 9 ರಂದು ಮಧುರೈ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆದಿದೆ. ‘ಇಂಡಿಯನ್ 2’ ತಂಡವು ರಾಜೇಂದ್ರನ್‌ಗೆ ಪ್ರತಿಕ್ರಿಯೆ ನೀಡಲು ಸಮಯ ಕೇಳಿದ ನಂತರ ನ್ಯಾಯಾಧೀಶರು ವಿಚಾರಣೆಯನ್ನು ಜುಲೈ 11 ಕ್ಕೆ ಮುಂದೂಡಿದ್ದಾರೆ.
“ಕಮಲ್ ಹಾಸನ್ ತಮ್ಮ ಪಾತ್ರಕ್ಕಾಗಿ ಯಾವ ರೀತಿಯ ಹೋಮ್‌ವರ್ಕ್ ಮಾಡುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಆದರೆ, ಅವರು ‘ಇಂಡಿಯನ್ 2’ ಗಾಗಿ ‘ವರ್ಮ ಕಲೈ’ಗಾಗಿ ಪ್ರಕಾಶಂ ಗುರುಕ್ಕಲ್ ಅವರನ್ನು ಸಂಪರ್ಕಿಸಿದ್ದಾರೆ. ಈ ಬಾರಿ ನಮಗೆ ತಜ್ಞರ ಸಲಹೆ ಬೇಕಿತ್ತು, ಮತ್ತು ನಾವು ಕೇರಳದಿಂದ ಪ್ರಕಾಶಂ ಗುರುಕ್ಕಲ್ ಅವರನ್ನು ಕರೆತಂದಿದ್ದೇವೆ ಮತ್ತು ಅವರ ಮಾರ್ಗದರ್ಶನವನ್ನು ತೆಗೆದುಕೊಂಡಿದ್ದೇವೆ. ಚಿತ್ರದಲ್ಲಿ ನೀವು ವಿಭಿನ್ನ ವರ್ಮಮ್ ಶೈಲಿಯನ್ನು ನೋಡಬಹುದು” ಎಂದು ಶಂಕರ್ ಅವರು ʼಇಂಡಿಯಾ ಟುಡೇ ಡಾಟ್‌ಇನ್ʼಗೆ ನಿರ್ದೇಶಕ ಶಂಕರ್ ಹೇಳಿದ್ದಾರೆ.
ಈ ಚಿತ್ರದಲ್ಲಿ ಕಮಲ್ ಹಾಸನ್ ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಎಸ್‌ಜೆ ಸೂರ್ಯ, ಬಾಬಿ ಸಿಂಹ ಮುಂತಾದವರು ನಟಿಸಿದ್ದಾರೆ.