ಹೊಸದಿಲ್ಲಿ: ಕೋಲ್ಕತ್ತಾ ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಮತ್ತು ಅದರ ಹಿನ್ನೆಲೆಯಲ್ಲಿ ನಡೆದ ಎಲ್ಲವನ್ನು ಬಂಗಾಳ ಸರ್ಕಾರ ನಿರ್ವಹಿಸಿದ ಕ್ರಮವನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ (TMC) ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ (Jawhar Sircar) ಭಾನುವಾರ (ಸೆ.08) ತಮ್ಮ ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಬರೆದ ಪತ್ರದಲ್ಲಿ ಸರ್ಕಾರ್ ಅವರು ತಮ್ಮದೇ ಪಕ್ಷದಲ್ಲಿನ ಭ್ರಷ್ಟರ ಅನಿಯಂತ್ರಿತ ಮಿತಿಮೀರಿದ ವರ್ತನೆಯನ್ನು ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಲವಾರು ತಿಂಗಳುಗಳಿಂದ ಬ್ಯಾನರ್ಜಿಯವರೊಂದಿಗೆ ಖಾಸಗಿಯಾಗಿ ಮಾತನಾಡಲು ಸಾಧ್ಯವಾಗದಿದ್ದಕ್ಕಾಗಿ ಅವರು ನಿರಾಶೆ ವ್ಯಕ್ತಪಡಿಸಿದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಾಗೂ ಸಮಸ್ಯೆ ಬಗೆಹರಿಸುವಲ್ಲಿ ಪಕ್ಷ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರವು ಭ್ರಷ್ಟಾಚಾರ ಮತ್ತು ನಾಯಕರ ವಿಭಾಗದ ಹೆಚ್ಚುತ್ತಿರುವ ತಂತ್ರಗಳ ಬಗ್ಗೆ ಸಾಕಷ್ಟು ಕಾಳಜಿಯಿಲ್ಲದಿರುವಂತೆ ತೋರುತ್ತಿರುವುದರಿಂದ ನಾನು ಭ್ರಮನಿರಸನಗೊಂಡಿದ್ದೇನೆ” ಎಂದು ಅವರು ಬರೆದಿದ್ದಾರೆ.
ನಾನು ಶೀಘ್ರದಲ್ಲೇ ಸಂಸತ್ತಿನ ಮೇಲ್ಮನೆ ಸದಸ್ಯತ್ವದಿಂದ ಕೆಳಗಿಳಿಯಲಿದ್ದಾರೆ. “ನಾನು ಸಂಸತ್ತಿಗೆ ಮತ್ತು ರಾಜಕೀಯದಿಂದ ಸಂಪೂರ್ಣವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ನಾನು ನಿಮಗೆ ತಿಳಿಸಬೇಕು” ಎಂದು ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ.