Advertisement
ಪಟ್ಟಣದಲ್ಲಿರುವ ದೇವಾಲಯಗಳ ಜಮೀನು, ಕೆರೆ, ಕಾಲುವೆ, ಪಾರ್ಕ್, ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ.
Related Articles
Advertisement
ತೊಂದರೆ ತಪ್ಪಿಸಲಿ: ಯಾರೆಲ್ಲ ಹಳೆಯ ಕಟ್ಟಡ ಕೆಡವುತ್ತಾರೊ ಅವರಿಂದ ಪುರಸಭೆಯವರೇ ತ್ಯಾಜ್ಯವನ್ನು ಒಂದು ಸ್ಥಳ ನಿಗದಿ ಮಾಡಿ ಸಂಗ್ರಹಿಸಿ ಮರುಬಳಕೆಗೆ ಯೋಜನೆ ರೂಪಿಸಿದರೆ ಒಳ್ಳೆಯದಾಗಲಿದೆ. ದೊಡ್ಡ ಕಟ್ಟಡಗಳನ್ನು ಕೆಡವಿದಾಗ ಸಾವಿರಾರು ಟನ್ ತ್ಯಾಜ್ಯದಿಂದ ಜನರಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸಬಹುದಾಗಿದೆ.
ಎಲ್ಲೆಂದರಲ್ಲಿ ತ್ಯಾಜ್ಯ: ಪುರಸಭೆ ಬಸ್ ನಿಲ್ದಾಣದ ಪಕ್ಕದ ಚಂದ್ರಮೌಳೇಶ್ವರ ದೇವಾಲಯಕ್ಕೆ ಸೇರಿದ ಮುಜರಾಯಿ ಇಲಾಖೆಯ ಖಾಲಿ ಸ್ಥಳದಲ್ಲಿ ಹೆಚ್ಚಾಗಿ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ. ಇದನ್ನು ತೆರವುಗೊಳಿ ಸಲು ಸರ್ಕಾರಕ್ಕೆ ಲಕ್ಷಗಟ್ಟಲೇ ಖರ್ಚು ಬರಲಿದೆ. ಪಟ್ಟಣದ ದೊಡ್ಡಕೆರೆ ಹಾಗೂ ಅತ್ತಿಗಿರಿಕೊಪ್ಪ ಕೆರೆಗಳ ಅಂಗಳದಲ್ಲಿ ಸಹ ತ್ಯಾಜ್ಯ ಸುರಿಯಲಾಗುತ್ತಿದೆ. ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ಭವನದ ಪಕ್ಕದಲ್ಲಿಯೂ ಕಸ ಸುರಿಯಲಾಗುತ್ತಿದೆ. ಕಟ್ಟಡ ತ್ಯಾಜ್ಯ ಸುರಿಯುವವರ ಮೇಲೆ ಕ್ರಮ ಜರುಗಿಸಲು ಪುರಸಭೆಗೆ ಅವಕಾಶವಿದೆ. ತ್ಯಾಜ್ಯ ಸುರಿಯುವವರಿಗೆ ತಿಳಿವಳಿಕೆ ಹೇಳಿ ಸರಿಪಡಿಸಬೇಕಿದೆ. ಪುರಸಭೆ ಮನಸ್ಸು ಮಾಡಿದರೆ ಕಟ್ಟಡ ನಿರ್ಮಾಣದ ಗುತ್ತಿಗೆದಾರರ ಸಭೆ ಮಾಡಿ ಹಳೆ ಕಟ್ಟಡ ತ್ಯಾಜ್ಯದ ಮರುಬಳಕೆಗೆ ಯೋಜನೆ ರೂಪಿಸಬಹುದಾಗಿದೆ.
– ಎಂ.ಸಿ.ಮಂಜುನಾಥ್