ಕೋಲಾರ: ಕೋಲಾರ ನಗರವು ಈಗ ಸಿಸಿ ಕ್ಯಾಮೆರಾಗಳ ಕಣ್ಗಾವಲಿನ ವ್ಯಾಪ್ತಿಗೆ ಒಳಪಟ್ಟಿದೆ. ಪೊಲೀಸ್ ವರಿಷ್ಠಾಧಿಕಾರಿ ಡಿ ದೇವರಾಜ್ ಅವರ ಪ್ರಯತ್ನದಿಂದ ಕೋಲಾರದ ಪ್ರಮುಖ ವೃತ್ತಗಳು ಸಿಸಿ ಕ್ಯಾಮೆರಾದ ನಿಗಾದಲ್ಲಿ ಇರುವಂತಾಗಿದೆ.
ಬುಧವಾರ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಸಿ ಸಿ ಕ್ಯಾಮೆರಾಗಳ ನಿಗ ಕುರಿತು ಪೊಲೀಸ್ ಎಸ್ ಪಿ ದೇವರಾಜ್ ಪ್ರತ್ಯಕ್ಷಿಕೆ ನೀಡಿದರು.
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಯೇ ಕುಳಿತು ಅತ್ಯಾಧುನಿಕ ಸಿ ಸಿ ಕ್ಯಾಮೆರಾ ಗಳ ಮೂಲಕ ಎಲ್ಲಾ ಪ್ರಮುಖ ವೃತ್ತಗಳ ಆಗುಹೋಗುಗಳನ್ನು ಗಮನಿಸಲು ಸಾಧ್ಯವಾಗಿದೆ.
ಆಯ್ದ ಪ್ರಮುಖ ವೃತ್ತಗಳ ದೃಶ್ಯಗಳನ್ನು ಟಿವಿ ಪರದೆಯ ಮೇಲೆ ಜೂಮ್ ಮಾಡಿ ನೋಡುವ ಅವಕಾಶ ಈ ಸೌಲಭ್ಯದಲ್ಲಿದೆ.
ಕೋಲಾರ ನಗರವು ಈಗ ಸಿಸಿ ಕ್ಯಾಮೆರಾದ ಕಣ್ಗಾವಲಿಗೆ ಒಳಪಟ್ಟಿರುವುದರಿಂದ ಸಂಚಾರ ದಟ್ಟಣೆ, ಅಪರಾಧ ಪ್ರಕರಣಗಳ ಪತ್ತೆ, ಕಿಡಿಗೇಡಿ ಕೃತ್ಯ, ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಅನುಕೂಲವಾಗಲಿದೆ.
ಪೊಲೀಸ್ ಇಲಾಖೆಯ ಈ ಯೋಜನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಕೆಲಸವನ್ನು ತೆಗೆದುಕೊಳ್ಳುವ ಮೂರ್ಖ ಸಿಕ್ಕಿದ ತತ್ ಕ್ಷಣ ರಾಜೀನಾಮೆ : ಎಲಾನ್ ಮಸ್ಕ್