Advertisement

ಕೊಹ್ಲಿ-ಧವನ್‌ ಭಾಂಗ್ರಾ ನೃತ್ಯ!

10:42 AM Jul 29, 2018 | |

ಲಂಡನ್‌: ಅವಕಾಶ ಸಿಕ್ಕಾಗಲೆಲ್ಲ ನಾಯಕ ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌ ಪಂಜಾಬಿನ ಭಾಂಗ್ರಾ ನೃತ್ಯ ಮಾಡುತ್ತಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಚೇಮ್ಸ್‌ಫೋರ್ಡ್‌ನಲ್ಲಿ ಕಾಣಸಿಕ್ಕಿದೆ. ಎಸೆಕ್ಸ್‌ ವಿರುದ್ಧದ ಪಂದ್ಯದ ಬಿಡುವಿನಲ್ಲಿ ಕೊಹ್ಲಿ-ಧವನ್‌ ಭಾಂಗ್ರಾ ನೃತ್ಯ ಮಾಡಿದ್ದಾರೆ.

Advertisement

ಇವರ ಡ್ಯಾನ್ಸ್‌ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಟಗಾರರು ಡ್ರೆಸ್ಸಿಂಗ್‌ ಕೊಠಡಿಯಿಂದ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ವೇಳೆ ಇವರನ್ನು ಸ್ವಾಗತಿಸಲು ಕ್ರೀಡಾಂಗಣದಲ್ಲಿ ಪಂಜಾಬಿ ಡ್ರಮ್ಸ್‌ ವಾದಕರನ್ನು ನಿಯೋಜಿಸಲಾಗಿತ್ತು. ಇವರು ಡ್ರಮ್ಸ್‌ ಬಡಿಯುತ್ತಿದ್ದರೆ, ತಡೆಯಲಾಗದೆ ಕೊಹ್ಲಿ ಮತ್ತು ಧವನ್‌ ಹೆಜ್ಜೆ ಹಾಕುತ್ತಲೇ ಫೀಲ್ಡಿಂಗ್‌ ನಡೆಸಲು ಅಂಗಳಕ್ಕೆ ತೆರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next