ಮುಕ್ಕಾಲು ಗಂಟೆ ಕಾಲ ಹೇರ್ಸ್ಟೈಲಿಂಗ್ ಮಾಡಿಸಿಕೊಂಡ ಕೊಹ್ಲಿ, ಕಿರಣ್ ಜತೆ ಆತ್ಮೀಯತೆಯಿಂದ ಹರಟಿದ್ದಾರೆ. ಸಲೂನ್ನಲ್ಲಿದ್ದ ಏಕೈಕ ಭಾರತೀಯ ಕಿರಣ್. ನೀವು ಎಲ್ಲಿನವರು ಎಂದು ಕೇಳಿದಾಗ, ಕರ್ನಾಟಕದವರು… ಮಂಗಳೂರಿನವರೆಂದು ಗೊತ್ತಾದಾಗ, “ಓಹ್ ಮಂಗಳೂರು, ಹಾಗಾದರೆ ಆರ್ಸಿಬಿ ಅಭಿಮಾನಿ’ ಎಂದು ಸಂಭ್ರಮಿಸಿದ್ದಾರೆ. ಇಬ್ಬರೂ ಖುಷಿ ಪಟ್ಟು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಬಿಗಿದಪ್ಪಿ ಆದರಿಸಿದ್ದಾರೆ. ಹೀಗೆ ಯಾವುದೇ ಬಿಗುಮಾನವಿಲ್ಲದೆ ತನ್ನೊಂದಿಗೆ ಮಾತನಾಡಿದ ಕೊಹ್ಲಿ ಸರಳತೆಗೆ ಕಿರಣ್ ಕೂಡ ಫಿದಾ ಆಗಿದ್ದಾರೆ.
Advertisement
ಪ್ರಸ್ತುತ ಭಾರತ ತಂಡ ಆಸ್ಟ್ರೇಲಿಯ ಪ್ರವಾಸದಲ್ಲಿದ್ದು, ಅಭ್ಯಾಸ ಪಂದ್ಯವಾಡಲು ಕ್ಯಾನ್ಬೆರಾಗೆ ಬಂದಿದೆ.ನೋವಾ ಎನ್ನುವ ಕಂಪೆನಿಯ ಸಲೂನ್ ಆಸ್ಟ್ರೇಲಿಯದಲ್ಲಿ ಖ್ಯಾತಿ ಪಡೆದಿದೆ. ಮೆಲ್ಬರ್ನ್, ಸಿಡ್ನಿಯಲ್ಲೂ ಇದರ ಶಾಖೆಗಳಿವೆ. ಕ್ಯಾನ್ಬೆರಾ ಸಲೂನ್ನ್ನು ನಡೆಸಿಕೊಂಡು ಹೋಗುತ್ತಿರುವವರು ಮಂಗಳೂರು ಮೂಲದ ಕಿರಣ್.
ಸಲೂನ್ನಲ್ಲಿ ಹೇರ್ಸ್ಟೈಲಿಂಗ್ ಮಾತ್ರವಲ್ಲ, ಪರ್ಫ್ಯೂಮ್ ಕೂಡ ಇದ್ದು, ಕೊಹ್ಲಿ ಕೆಲವನ್ನು ಖರೀದಿಸಿದ್ದಾರೆ.
ಇದುವರೆಗೆ ನಮ್ಮ ಸಲೂನ್ಗೆ ಈ ರೀತಿ ಖ್ಯಾತನಾಮರು ಬಂದದ್ದಿಲ್ಲ, ಆಸ್ಟ್ರೇಲಿಯದ ಚಿತ್ರತಾರೆಯರು ಬರುತ್ತಿರುತ್ತಾರೆ. ಕೊಹ್ಲಿ ಬಂದು ತೆರಳಿದ್ದು ವಿಶೇಷ ಅನುಭವ ಎಂದು ಕಿರಣ್ “ಉದಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.