Advertisement

Hockey: ಕುಂಡ್ಯೋಳಂಡ ಹಾಕಿ ಟೂರ್ನಿ ಆರಂಭ

11:05 PM Mar 30, 2024 | Team Udayavani |

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ 24ನೇ ಹಾಕಿ ಹಬ್ಬ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ 2024′ ನಾಪೋಕ್ಲುವಿನ ಕೆಪಿಎಸ್‌ ಶಾಲೆಯ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಉದ್ಘಾಟನೆಗೊಂಡಿತು.

Advertisement

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್‌. ಪೊನ್ನಣ್ಣ ಅವರು ಹಾಕಿ ಹಬ್ಬವನ್ನು ಉದ್ಘಾಟಿಸಿದರು.

ಅನಂತರ ಮಾತನಾಡಿದ ಅವರು, ಕೊಡಗಿನ ವಿಶಿಷ್ಟ ಕೊಡವ ಸಂಸ್ಕೃತಿ, ಸಂಪ್ರದಾಯಗಳೊಂದಿಗೆ, ಹಾಕಿ ಕ್ರೀಡೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿಕೊಂಡು ಮುಂದುವರಿಸಿ ಕೊಂಡು ಹೋಗುವುದು ಅಗತ್ಯ. ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ಹೆಮ್ಮೆಯ ಪ್ರತೀಕವಾಗಿದೆ ಎಂದರು.

24ನೇ ವರ್ಷದ ಕ್ರೀಡಾಹಬ್ಬದ ಅಂಗವಾಗಿ ಬಂದೂಕಿನಿಂದ ಅಷ್ಟೇ ಸಂಖ್ಯೆಯ ಗುಂಡುಗಳನ್ನು ಆಕಾಶಕ್ಕೆ ಸಿಡಿಸಿ ಸಂಭ್ರಮಿ ಸಲಾಯಿತು. ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ರಾದ ಕುಂಡ್ಯೋಳಂಡ ಎ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next