Advertisement

Kodagu; ಇಂದಿನಿಂದ ಕುಂಡ್ಯೋಳಂಡ ಹಾಕಿ ಹಬ್ಬ: ಗಿನ್ನೆಸ್‌ ದಾಖಲೆ?

11:58 PM Mar 29, 2024 | Team Udayavani |

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ 24ನೇ ವರ್ಷದ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಶನಿವಾರದಿಂದ ಎಪ್ರಿಲ್‌28ರ ವರೆಗೆ ನಾಪೋಕ್ಲುವಿನ ಕೆಪಿಎಸ್‌ ಶಾಲೆಯ “ಜನರಲ್‌ ತಿಮ್ಮಯ್ಯ ಕ್ರೀಡಾಂಗಣ’ದಲ್ಲಿ ಪಂದ್ಯಾಟ ನಡೆಯಲಿದೆ.

Advertisement

ಏಕಕಾಲಕ್ಕೆ 30 ಸಾವಿರ ಮಂದಿ ಆಸೀನರಾಗಿ ಪಂದ್ಯಾಟ ವೀಕ್ಷಿಸಲು ಅನುಕೂಲವಾಗುವಂತೆ ಮೈದಾನದ ಸುತ್ತಲೂ ಗ್ಯಾಲರಿ ನಿರ್ಮಾಣವಾಗಿದೆ. ಗಣ್ಯಾತಿಗಣ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಮಾದರಿಯಲ್ಲಿ 3 ಮೈದಾನಗಳನ್ನು ಸಿದ್ಧಗೊಳಿಸಲಾಗಿದೆ. ಪ್ರತೀ ಮೈದಾನದಲ್ಲಿ ದಿನಕ್ಕೆ 6 ಪಂದ್ಯಗಳಂತೆ ಒಟ್ಟು 18 ಪಂದ್ಯಗಳು ನಡೆಯಲಿವೆ.

ಈ ಬಾರಿ 360 ಕೊಡವ ಕೌಟುಂಬಿಕ ತಂಡಗಳು ನೋಂದಾವಣೆ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ಕ್ರೀಡಾಕೂಟವನ್ನು ಗಿನ್ನೆಸ್‌ ದಾಖಲೆಗೆ ಸೇರಿಸುವ ಆಶಯ ಕುಂಡ್ಯೋಳಂಡ ಕುಟುಂಬಸ್ಥರದ್ದು.

4ಲಕ್ಷ ರೂ. ಬಹುಮಾನ
ಕುಂಡ್ಯೋಳಂಡ ಹಾಕಿ ಹಬ್ಬದ ವಿಜೇತ ತಂಡಕ್ಕೆ 4ಲಕ್ಷ ರೂ., ದ್ವಿತೀಯ ತಂಡಕ್ಕೆ 3ಲಕ್ಷ ರೂ. ತೃತೀಯ ತಂಡಕ್ಕೆ 2 ಲಕ್ಷ ರೂ. ಮತ್ತು 4ನೇ ಸ್ಥಾನದ ತಂಡಕ್ಕೆ ಒಂದು ಲಕ್ಷ ರೂ. ನಗದು ನೀಡಲಾಗುವುದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್‌. ಪೊನ್ನಣ್ಣ ಅವರು ಕೂಟವನ್ನು ಉದ್ಘಾಟಿಸಲಿದ್ದಾರೆ.

2 ಕೋಟಿ ರೂ. ವೆಚ್ಚ
ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ 2 ಕೋಟಿ ರೂ. ಖರ್ಚಾಗುತ್ತಿದ್ದು, ಕುಂಡ್ಯೋಳಂಡ ಕುಟುಂಬಸ್ಥರಿಂದ ರೂ. 30ಲಕ್ಷ ಸಂಗ್ರಹಿಸಲಾಗಿದೆ. ಕಳೆದ ವರ್ಷದ ಹಾಕಿ ಹಬ್ಬಕ್ಕೆ ಸರಕಾರ ಒಂದು ಕೋಟಿ ರೂ. ನೀಡಿತ್ತು.

Advertisement

2025: ಮುದ್ದಂಡ ಹಾಕಿ ಹಬ್ಬ
2025ರ 25ನೇ ಆವೃತ್ತಿಯ ಕೊಡವ ಕುಟುಂಬಗಳ ನಡುವಿನ ಹಾಕಿಹಬ್ಬ ನಡೆಸಲು ಹಾಕಿ ಅಕಾಡೆಮಿಯು ಮುದ್ದಂಡ ಕುಟುಂಸ್ಥರಿಗೆ ಅವಕಾಶ ನೀಡಿದೆ. ಈ ಹಾಕಿಹಬ್ಬ ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next