Advertisement

ಜ್ಞಾನದ ದಾಹ ಬತ್ತದು: ಡಾ|ಹೆಗ್ಗಡೆ

08:50 AM Jul 24, 2017 | Team Udayavani |

ಉಡುಪಿ: ಪುಸ್ತಕಗಳನ್ನು ಓದುವತ್ತ ಮಕ್ಕಳನ್ನು ಸೆಳೆಯುವ ಕಾರ್ಯವಾಗಬೇಕು. ಪುಸ್ತಕವು ಜ್ಞಾನದ ಸಂಪತ್ತನ್ನು ಒಳಗೊಂಡಿದೆ. ವಯಸ್ಸು ಎಷ್ಟೇ ಸರಿದರೂ ಜ್ಞಾನದ ದಾಹ ಬತ್ತದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶಾಂತಿವನ ಟ್ರಸ್ಟ್‌, ಶ್ರೀಕ್ಷೇತ್ರ ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜು. 22ರಂದು ಕಡಿಯಾಳಿಯ ಯು. ಕಮಲಾಬಾಯಿ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ “ಜ್ಞಾನ ಸಿರಿ’ ಮತ್ತು “ಜ್ಞಾನ ಐಸಿರಿ’ 2017ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ (ದಕ್ಷಿಣ ವಲಯ) ಡಾ| ಮಹೇಶ್‌ ಜೋಶಿ ಶುಭಾಸಂಶನೆಗೈದರು. ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌, ಡಿಡಿಪಿಐ ದಿವಾಕರ ಶೆಟ್ಟಿ ಎಚ್‌., ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ| ಐ. ಶಶಿಕಾಂತ್‌ ಜೈನ್‌, ಕಡಿಯಾಳಿ ಶಾಲೆ ಮುಖ್ಯೋಪಾಧ್ಯಾಯ ಗಣೇಶ್‌ ಹೆಬ್ಟಾರ್‌ ಉಪಸ್ಥಿತರಿದ್ದರು.

ನೈತಿಕತೆ ಪುನಃ ಸ್ಥಾಪನೆಯಾಗಲಿ: ಪ್ರಮೋದ್‌
ಪುಸ್ತಕ ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಗತಕಾಲವು ಪ್ರಾಮಾಣಿಕತೆ, ನೈತಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಪ್ರಸ್ತುತ ನೈತಿಕತೆ ಅಧಃಪತನವಾಗುತ್ತಿದೆ. ಗತಕಾಲದ ನೈತಿಕ ಮೌಲ್ಯವನ್ನು ಮರು ಸ್ಥಾಪಿಸಬೇಕಾದರೆ ಮಕ್ಕಳಲ್ಲಿ ನೈತಿಕ ಪ್ರಜ್ಞೆ ಮೂಡಿಸುವು ದೊಂದೇ ದಾರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next