Advertisement

ಜ್ಞಾನ ದಾನಕ್ಕೆ ಶೇಷ್ಠ ಅಧಿ ಕಮಾಸ: ಮಂತ್ರಾಲಯ ಶ್ರೀ

09:52 AM Jun 04, 2018 | |

ಬಳಗಾನೂರು: ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸವನ್ನು ಪರಮಾತ್ಮ ತನ್ನ ಪೂಜೆಗೆ ಮೀಸಲು ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಪುರುಷೋತ್ತಮನನ್ನು ಧ್ಯಾನ ಮಾಡಲು ಶೇಷ್ಠವಾದ ಮಾಸವಿದು ಎಂದು ಮಂತ್ರಾಲಯ ಮಠದ ಸುವಿಧ್ಯೇಂದ್ರತಿರ್ಥ ಶ್ರೀಪಾದಂಗಳು ನುಡಿದರು.

Advertisement

ಅಧಿ ಕ ಜೇಷ್ಠ ಮಾಸ ನಿಮಿತ್ತ ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ವಿಪ್ರ ಸಮುದಾಯ ಹಾಗೂ ಭಕ್ತರು ಹಮ್ಮಿಕೊಂಡಿದ್ದ ಮುಖ್ಯ ಪ್ರಾಣ ದೇವರಿಗೆ ವಿಶೇಷ ಪೂಜೆ ಹಾಗೂ ಪವಮಾನ ಹೋಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಕಲರಿಗೂ ಬಂಧು-ಬಳಗವಾಗಿರುವ ಮುಖ್ಯ ಪ್ರಾಣದೇವರು ಭಗವಂತನ ಪ್ರಧಾನ ಅರ್ಚಕರು. ಇವರ ಸಾನ್ನಿಧ್ಯದಲ್ಲಿ ಪುರುಷೋತ್ತಮ ಮಾಸದಲ್ಲಿ ಭಗವಂತನಿಗೆ ಪೂಜೆ, ಹೋಮ-ಹವನ ನೆರವೇರಿಸುವುದರಿಂದ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ. ಈ ಮಾಸದಲ್ಲಿ ಪ್ರತಿಯೊಬ್ಬರು ಜ್ಞಾನ ದಾನದಲ್ಲಿ ತೊಡಗಬೇಕು. 33 ಕೋಟಿ ದೇವತೆಗಳನ್ನು ಪೂಜೆ ಮಾಡಲು ಶೇಷ್ಠವಾದ ಮಾಸ ಇದಾಗಿದೆ. ಪ್ರಾಣ ದೇವರಲ್ಲಿ ಪರಮಾತ್ಮ ಪುರುಷೋತ್ತಮರು ನೆಲೆಸಿದ್ದಾರೆ. 33 ಸಂಖ್ಯೆ ಪರಮಾತ್ಮನಿಗೆ ಪ್ರಿಯವಾಗಿರುವ ಹಿನ್ನೆಲೆಯಲ್ಲಿ 33 ಪವಮಾನ ಹೋಮ, ಪೂಜಾ ವಿಧಾನಗಳನ್ನು ನೆರವೇರಿಸುವುದರ ಮೂಲಕ ಭಗವಂತನ ಕೃಪೆ ದೊರೆಯಲಿದೆ. ಇಂತಹ ಅಭೂತಪೂರ್ವ ಮಹಾತ್ಕಾರ್ಯ ನೆರವೇರಿಸಿರುವ ಸದ್ಭಕ್ತರಿಗೆ ಸನ್ಮಂಗಲವಾಗಲಿ ಎಂದರು. 

ಮಂತ್ರಾಲಯ ಮಠದ ಸುವಿಧ್ಯೇಂದ್ರತಿರ್ಥ ಶ್ರೀಪಾದಂಗಳು ಪವಮಾನ ಹೋಮ, ಪೂರ್ಣಾಹುತಿ ಕಾರ್ಯ ನೆರವೇರಿಸಿದರು. ಶ್ರೀ ಮಾರುತಿಗೆ ಮಧು ಅಭಿಷೇಕ, ವಿವಿಧ ಪೂಜಾ ಕಾರ್ಯಕ್ರಮಗಳನ್ನು ಸುರೇಂದ್ರ ಆಚಾರ್ಯ ಕೋರ್ತಕುಂದ ನೇತೃತ್ವದಲ್ಲಿ ನೆರವೇರಿಸಲಾಯಿತು. 46 ಜೋಡಿ ದಂಪತಿ ಪಾಲ್ಗೊಂಡಿದ್ದರು.

ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಹೋಮ ಕಾರ್ಯದಲ್ಲಿ ಭಾಗವಹಿಸಿದ್ದ ದಂಪತಿಗೆ ಮಂತ್ರಾಲಯ ಶ್ರೀಗಳು ಆಶೀರ್ವಚನ ನೀಡಿದರು. ಸಂದರ್ಭದಲ್ಲಿ ಹನುಮೇಶ ಜೋಷಿ, ಗುರುರಾಜ ಆಚಾರ್ಯ ಮೂರ್ತಿ ಆಚಾರ್ಯ, ಹನುಮೇಶ ಕುಲಕರ್ಣಿ, ಗಿರೀಶ ಆಚಾರ್ಯ, ಪದ್ಮನಾಭಾಚಾರ್ಯ, ಸಮೀರ ಆಚಾರ್ಯ, ಮಧುಸೂಧನ ಆಚಾರ್ಯ, ರಾಮಾಚಾರ್ಯ, ವಿಜಯಾಚಾರ್ಯ, ಬದ್ರಿ ಆಚಾರ್ಯ, ಸುರೇಶ ಆಚಾರ್ಯ, ರಂಗನಾಥ ಪೂಜಾರ, ಮುಖಂಡರಾದ ಶಂಕರರಾವ್‌ ಕುಲಕರ್ಣಿ, ಶೇಖರಪ್ಪ ಮೇಟಿ, ಪಂಪನಗೌಡ ಮಾಲಿಪಾಟೀಲ, ಮಲ್ಲರಾವ ಪಟವಾರಿ, ಬಾಬಣ್ಣ ಆಚಾರ್ಯ ಹಾಗೂ ಸದ್ಭಕ್ತರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next