Advertisement
ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 1939ರಲ್ಲಿ ಸಪ್ತರ್ಷಿಗಳು ಆರಂಭಿಸಿದ ಕರ್ನಾಟಕ ಲಾ ಸೊಸೈಟಿ ಇಂದು ಹೆಮ್ಮರವಾಗಿ ಬೆಳೆದಿದೆ. 75 ವರ್ಷಗಳ ಪೂರ್ಣಗೊಳಿಸಿ ಸಾರ್ಥಕತೆ ಪಡೆದುಕೊಂಡಿದೆ. ಈ ಹೆಮ್ಮೆಯ ಕ್ಷಣದ ಸಾಧನೆಯ ಮೈಲುಗಲ್ಲು ಅಭಿನಂದಿಸಲು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಕಾರ್ಯಕ್ರಮದ ಪಟ್ಟಿ ಸಿದ್ಧಗೊಂಡಿಲ್ಲ. ರಾಷ್ಟ್ರಪತಿ ಕಾರ್ಯಾಲಯದಿಂದ ಬರುವ ಸೂಚನೆ ಮೇರೆಗೆ ಆಹ್ವಾನ ಪತ್ರಿಕೆ ಸಿದ್ಧಗೊಳಿಸಲಾಗುವುದು. ಜತೆಗೆ ಪೊಲೀಸರ ನಿರ್ದೇಶನದಂತೆ ಜಿಐಟಿ ಕಾಲೇಜು ಕ್ಯಾಂಪಸ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.