Advertisement

ಅ.31ರಿಂದ ಬೆಂಗಳೂರು-ಆ್ಯಮ್‌ಸ್ಟರ್‌ಡಾಮ್‌ ವಿಮಾನ ಹಾರಾಟ ಆರಂಭಿಸುವ ಕೆಎಲ್‌ಎಂ

09:52 AM May 30, 2019 | Team Udayavani |

ಹೊಸದಿಲ್ಲಿ : ಭಾರತದಲ್ಲಿನ ತನ್ನ ಉಪಸ್ಥಿತಿಯನ್ನು ವಿಸ್ತರಿಸಲು ಉದ್ದೇಶಿಸಿರುವ ಡಚ್‌ ವಿಮಾನಯಾನ ಸಂಸ್ಥೆ ಕೆಎಲ್‌ಎಂ ಈ ವರ್ಷ ಅಕ್ಟೋಬರ್‌ 31ರಂದು ತಾನು ಬೆಂಗಳೂರು-ಆ್ಯಮ್‌ಸ್ಟರ್‌ಡಾಮ್‌ ಮಾರ್ಗದಲ್ಲಿ ವಿಮಾನ ಯಾನ ಸೇವೆಯನ್ನು ಆರಂಭಿಸುವುದಾಗಿ ಹೇಳಿದೆ.

Advertisement

ನೆದರ್‌ಲ್ಯಾಂಡ್‌ ಧ್ವಜವನ್ನು ಹೊಂದಿರುವ ಕೆಎಲ್‌ಎಂ, ಬೆಂಗಳೂರಿನಿಂದ ಪ್ರತೀ ಮಂಗಳವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ನಡೆಸುವುದಾಗಿ ಹೇಳಿದೆ.

ಇದೇ ವೇಳೆ ಕೆಎಲ್‌ಎಂ, ಇದೇ ವರ್ಷ ಸೆ.2ರಿಂದ ಮುಂಬಯಿ-ಆ್ಯಮ್‌ಸ್ಟರ್‌ಡಾಮ್‌ ನಡುವಿಎ ಒಂದು ಹೆಚ್ಚುವರಿ ವಿಮಾನ ಹಾರಾಟ ಆರಂಭಿಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next