ದುಬೈ: ಎರಡು ವರ್ಷಗಳಿಂದ ಶತಕದ ಬರ ಅನುಭವಿಸುತ್ತಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಗುರುವಾರ ಅಫ್ಘಾನಿಸ್ಥಾನ ವಿರುದ್ಧ ಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಅಜೇಯ ಆಟವಾಡಿದರು.
ಮುಂದಿನ ದಿನಗಳಲ್ಲೂ ವಿರಾಟ್ ಕೊಹ್ಲಿಯೇ ಇನ್ನಿಂಗ್ಸ್ ತೆರೆಯಬೇಕೆ ಎಂಬ ಪ್ರಶ್ನೆ ಗೆ ಉತ್ತರಿಸಿದ ಕೆಎಲ್ ರಾಹುಲ್ ಸೂಕ್ತ ಉತ್ತರ ನೀಡಿದರು.
“ಹಾಗಾದರೆ ನಾನು ಏನು ಮಾಡಬೇಕು? ನಾನು ಹೊರಗೆ ಕುಳಿತುಕೊಳ್ಳಬೇಕೆಂದು ನೀವು ಬಯಸುತ್ತೀರಾ?” ಎಂದು ಕೆಎಲ್ ರಾಹುಲ್ ಕೇಳಿದರು.
ನಿನ್ನೆಯ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ರಾಹಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿರಾಟ್ ರನ್ ಗಳಿಸುತ್ತಿರುವುದು ನಮಗೆ ದೊಡ್ಡ ಬೋನಸ್. ಅವರ ಬ್ಯಾಟಿಂಗ್ ನಿಂದ ಅವರು ಸಂತಸ ಪಡುತ್ತಿದ್ದಾರೆ. ಕಳೆದ 2-3 ಸರಣಿಯಿಂದ ಅವರು ತಮ್ಮ ಆಟದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅದೀಗ ಸುಂದರವಾಗಿ ಹೊರಹೊಮ್ಮಿದೆ. ಈ ರೀತಿ 2-3 ಇನ್ನಿಂಗ್ಸ್ ಆಡಿದರೆ ಆತ್ಮವಿಶ್ವಾಸ ಮೂಡುತ್ತದೆ. ಅವರು ಆ ರೀತಿ ಆಡುವುದರಿಂದ ಸಂತೋಷವಾಗಿದೆ” ಎಂದರು.
ಇದನ್ನೂ ಓದಿ:ಬ್ರಿಟನ್ ರಾಣಿ ಎಲಿಜಬೆತ್ II ಯುಗಾಂತ್ಯ: ದೀರ್ಘಕಾಲದ ಬಳಿಕ ಚಾರ್ಲ್ಸ್ ಮುಡಿಗೆ ರಾಜ ಕಿರೀಟ
“ಅವರು ಓಪನಿಂಗ್ ಮಾಡುವಾಗ ಮಾತ್ರ ಅವರು ಶತಕಗಳನ್ನು ಬಾರಿಸುತ್ತಾರೆ ಎಂದಲ್ಲ, ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಗಲೂ ಅವರು ಶತಕಗಳನ್ನು ಗಳಿಸಬಹುದು. ತಂಡ ಬಯಸುವ ಕ್ರಮಾಂಕದಲ್ಲಿ ಅವರು ಆಡುತ್ತಾರೆ. ಅವರು ಯಾವ ಕ್ರಮಾಂಕದಲ್ಲಿ ಆಡಿದರೂ ಉತ್ತಮ ಪ್ರದರ್ಶನ ನೀಡುತ್ತಾರೆ. ಅದರ ಬಗ್ಗೆ ಯಾವುದೇ ಅನುಮಾನವಿಲ್ಲ” ಎಂದು ರಾಹುಲ್ ಹೇಳಿದರು.