Advertisement

ಬಾಂಗ್ಲಾ ಎದುರು ಸೋಲು ; ಗರಿಷ್ಠ ರನ್ ಮಾಡಿಯೂ ಆಕ್ರೋಶಕ್ಕೆ ಗುರಿಯಾದ ರಾಹುಲ್

10:02 PM Dec 04, 2022 | Team Udayavani |

ಢಾಕಾ : ಇಲ್ಲಿ ಭಾನುವಾರ ನಡೆದ ಆತಿಥೇಯ ಬಾಂಗ್ಲಾದೇಶದ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮೈದಾನದಲ್ಲಿ ಸಾಕಷ್ಟು ಕಳಪೆಯಾಗಿತ್ತು. ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕೆ.ಎಲ್. ರಾಹುಲ್ ಅವರ ಕ್ಯಾಚ್ ಡ್ರಾಪ್ ಎಲ್ಲರ ಗಮನವನ್ನು ಸೆಳೆಯಿತು. ರಾಹುಲ್ ಭಾರತದ ಪರ ಗರಿಷ್ಠ ಸ್ಕೋರ್ ಮಾಡಿದರೂ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

Advertisement

ಭಾರತ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿ ಯಾದರೆ ಗೆಲುವಿನತ್ತ ದಾಪುಗಾಲಿಡುತ್ತಿತ್ತು. ಬಾಂಗ್ಲಾದೇಶವು ಗೆಲುವಿನಿಂದ 41 ರನ್‌ಗಳ ಅಂತರದಲ್ಲಿತ್ತು. ಭಾರತಕ್ಕೆ ಬೇಕಾಗಿದ್ದುದು ಉತ್ತಮ ಚೆಂಡು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ರಾಹುಲ್ ಕೈಗೆ ಬಂದ ಮೆಹಿದಿ ಹಸನ್ ಮಿರಾಜ್ ಅವರ ನಿರ್ಣಾಯಕ ಕ್ಯಾಚ್ ಅನ್ನು ಕೈಬಿಟ್ಟರು. ಕೊನೆಯ ವಿಕೆಟ್ ಗೆ ಹೋರಾಟ ನೀಡಿದ ಮೆಹಿದಿ ಹಸನ್ ಮಿರಾಜ್ ಏಕಾಂಗಿಯಾಗಿ ಬಾಂಗ್ಲಾದೇಶವನ್ನು ಗೆಲ್ಲಿಸಿದರು.

ಇಂದು ಕೆಎಲ್ ರಾಹುಲ್, ಇತರ ಬ್ಯಾಟ್ಸ್‌ಮನ್‌ಗಳು ಕಷ್ಟಪಡುತ್ತಿರುವಾಗ ಟೀಮ್ ಇಂಡಿಯಾಕ್ಕೆ ಹೆಚ್ಚು ಅಗತ್ಯವಿದ್ದ ರನ್‌ಗಳನ್ನು ಗಳಿಸಿದರು.
ತದನಂತರ ಅತ್ಯಂತ ಪ್ರಮುಖ ಮ್ಯಾಚ್ ವಿನ್ನಿಂಗ್ ಕ್ಯಾಚ್ ಅನ್ನು ಕೈಬಿಟ್ಟರು. ನಾವು ಅಲ್ಲಿ ಸೋತಿದ್ದೇವೆ.ಅವರು ಹೀರೋ ಅಥವಾ ವಿಲನ್.. ಎಂಬ ಗೊಂದಲ ಉಂಟಾಗುತ್ತಿದೆ ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಟೀಕೆಗಳ ಪ್ರವಾಹವನ್ನೇ ಹರಿಸಿದ್ದಾರೆ.

ಬಾಂಗ್ಲಾದೇಶ ಕೇವಲ 1 ವಿಕೆಟಿನಿಂದ ಜಯ ಸಾಧಿಸಿತು. ಏಳು ವರ್ಷಗಳ ನಂತರ ಬಾಂಗ್ಲಾದೇಶದ ವಿರುದ್ಧ ಭಾರತ ತನ್ನ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಂಡಿತು.2015 ರಲ್ಲಿ ಸೋತಿತ್ತು.

ಮೆಹಿದಿ ಹಸನ್ ಮಿರಾಜ್ 39 ಎಸೆತಗಳಲ್ಲಿ 38 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡ ಸಂಕಷ್ಟದಲ್ಲಿದ್ದ ವೇಳೆ ನೇರವಾದ ಮುಸ್ತಾಫಿಜುರ್ ರೆಹಮಾನ್ ಔಟಾಗದೆ 10 ರನ್ ಕೊಡುಗೆ ನೀಡಿ ಗೆಲುವಿನ ಸಂಭ್ರಮಕ್ಕೆ ಕಾರಣರಾದರು.136 ಕ್ಕೆ 9 ವಿಕೆಟ್ ಕಳೆದು ಸಂಕಷ್ಟದಲ್ಲಿದ್ದರೂ ತಂಡಕ್ಕೆ ನೆರವಾದ ಮೆಹಿದಿ ಹಸನ್ ಮತ್ತು ಮುಸ್ತಾಫಿಜುರ್ ಬಾಲದಲ್ಲಿ ಬಲವಿದೆ ಎಂದು ತೋರಿಸಿ ಭಾರತದ ಗೆಲ್ಲುವ ಆಸೆಗೆ ತಣ್ಣೀರೆರೆಚಿದರು.

Advertisement

ಬ್ಯಾಟಿಂಗ್ ನಲ್ಲಿ ಉಪನಾಯಕ ಕೆ.ಎಲ್. ರಾಹುಲ್ ಸಮಯೋಚಿತ ಆಟದ ಕಾರಣ ಭಾರತ ತಂಡ ಗೌರವಯುತ ಮೊತ್ತ ಗಳಿಸಲು ಸಾಧ್ಯವಾಗಿತ್ತು. 70 ಎಸೆತಗಳಲ್ಲಿ 73 ರನ್ ಗರಿಷ್ಠ ಕೊಡುಗೆ ನೀಡಿದರು. ಭಾರತ ತಂಡ 41.2 ಓವರ್ ಗಳಲ್ಲಿ 186 ರನ್ ಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ, 9 ವಿಕೆಟ್ ನಷ್ಟಕ್ಕೆ 46 ಓವರ್ ಗಳಲ್ಲಿ 187 ರನ್ ಗಳಿಸಿ ಜಯ ಸಾಧಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next