Advertisement
ಡೇವಿಡ್ ವಾರ್ನರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ ಜಾನಿ ಬೇರ್‌ಸ್ಟೊ ಐದೇ ರನ್ನಿಗೆ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ಆಘಾತವಿಕ್ಕಿತು. ಅವರನ್ನು ಬೌಲ್ಡ್ ಮಾಡುವ ಮೂಲಕ ಪ್ಯಾಟ್ ಕಮಿನ್ಸ್ ಕಳೆದ ಪಂದ್ಯದ ವೈಫಲ್ಯವನ್ನು ಬದಿಗೊತ್ತಿದರು. ಅವರು ಮೊದಲ ಸ್ಪೆಲ್‌ನ 3 ಓವರ್‌ಗಳಲ್ಲಿ ನೀಡಿದ್ದು ಬರೀ 11 ರನ್. ಮೊದಲ ವಿಕೆಟ್ ಪತನದ ವೇಳೆ ಹೈದರಾಬಾದ್ 4 ಓವರ್‌ಗಳಿಂದ 24 ರನ್ ಮಾಡಿತ್ತು. ಪವರ್ ಪ್ಲೇ ಸ್ಕೋರ್ ಒಂದಕ್ಕೆ 40 ರನ್.
Related Articles
Advertisement
ಇನ್ನೊಂದು ತುದಿಯಲ್ಲಿದ್ದ ವೃದ್ಧಿಮಾನ್ ಸಾಹಾ ಮಾತ್ರ ಚಡಪಡಿಸುತ್ತಲೇ ಉಳಿದರು. ಅವರು 30 ರನ್ನಿಗೆ 31 ಎಸೆತ ತೆಗೆದುಕೊಂಡರು (1 ಬೌಂಡರಿ, 1 ಸಿಕ್ಸರ್). ಪಾಂಡೆ-ಸಾಹಾ ಜೋಡಿಯಿಂದ 3ನೇ ವಿಕೆಟಿಗೆ 51 ಎಸೆತಗಳಿಂದ 62 ರನ್ ಒಟ್ಟುಗೂಡಿತು.
ಒಟ್ಟು 5 ಬದಲಾವಣೆಈ ಪಂದ್ಯಕ್ಕಾಗಿ ಎರಡು ತಂಡಗಳಲ್ಲಿ ಒಟ್ಟು 5 ಬದಲಾವಣೆ ಕಂಡುಬಂತು. ಹೈದರಾಬಾದ್ ತಂಡದಲ್ಲಿ 3 ಪರಿವರ್ತನೆ ಸಂಭವಿಸಿತು. ಗಾಯಾಳಾಗಿ ಹೊರಬಿದ್ದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಸ್ಥಾನಕ್ಕೆ ಅಫ್ಘಾನಿಸ್ಥಾನದ ಸ್ಪಿನ್ನರ್ ಮೊಹಮ್ಮದ್ ನಬಿ ಬಂದರು. ವಿಜಯ್ ಶಂಕರ್ ಬದಲು ವೃದ್ಧಿಮಾನ್ ಸಾಹಾ ಹಾಗೂ ಗಾಯಾಳು ಸಂದೀಪ್ ಶರ್ಮ ಬದಲು ಖಲೀಲ್ ಅಹ್ಮದ್ ಸ್ಥಾನ ಪಡೆದರು. ಕೆಕೆಆರ್ ತಂಡದಲ್ಲಿ ಕಮಲೇಶ್ ನಾಗರಕೋಟಿ ಮತ್ತು ವರುಣ್ ಚಕ್ರವರ್ತಿ ಆಡಲಿಳಿದರು. ಇವರಿಗಾಗಿ ಜಾಗ ಖಾಲಿ ಮಾಡಿದವರು ಸಂದೀಪ್ ವಾರಿಯರ್ ಮತ್ತು ನಿಖೀಲ್ ನಾೖಕ್.